LATEST NEWS
ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಮೋದಿ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ? -ದಯಾನಂದ ಸ್ವಾಮೀಜಿ
ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಮೋದಿ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ? -ದಯಾನಂದ ಸ್ವಾಮೀಜಿ
ಉಡುಪಿ ನವೆಂಬರ್ 28: ಸಂಪೂರ್ಣ ಮಾಂಸ ರಫ್ತು ನಿಷೇಧ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮ್ಮ ದೇಶಕ್ಕೆ ಮಾಂಸ ರಪ್ತು ಮಾಡಿದ ಹಣ ಬೇಕಾ ಎಂದು ಪ್ರಶ್ನಿಸಿದರು. ಮಾಂಸ ರಪ್ತು ಮಾಡಿ ಗಳಿಸಿದ ಹಣ ದೇಶಕ್ಕೆ ಕಳಂಕ ಪ್ರಾಯ ಎಂದರು.
ಪ್ರಧಾನಿ ಮೋದಿ ಮೇಲೆ ಸಾಧು ಸಂತರಿಗೆ ಅಪಾರ ವಿಶ್ವಾಸವಿತ್ತು, ಆದರೆ ಅಧಿಕಾರ ಬಂದು ಇಷ್ಟು ಸಮಯವಾದರೂ ಯಾಕೆ ಮಾಂಸ ರಫ್ತು ನಿಷೇಧ ಮಾಡಿಲ್ಲ ಎಂದು ಪ್ರಶ್ನಿಸಿದರು.
ದೇಶದ ಮಾಂಸಾಹಾರಿಗಳೂ ಮಾಂಸ ರಫ್ತು ನಿಷೇಧವನ್ನು ಬೆಂಬಲಿಸಿದ್ದಾರೆ, ರಪ್ತು ನಿಷೇಧ ಮಾಡಲು ಸಮಸ್ಯೆ ಇದ್ದರೆ ಕಾರಣವನ್ನು ಜನರ ಮುಂದಿಡಿ ಎಂದ ದಯಾಂದ ಸ್ವಾಮಿಜಿ ಸಮಸ್ಯೆ ಇಲ್ಲವಾದರೆ ಇಲ್ಲವೇ ತಕ್ಷಣ ನಿಷೇಧ ಮಾಡಿ ಎಂದರು. ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಆಸೆ ನಿಮಗಿದ್ದರೆ ನೀವು ದೇಶದ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ಎಂದು ನಾವು ಪ್ರಶ್ನಿಸಬೇಕಾಗುತ್ತದೆ ಎಂದರು.