LATEST NEWS
ಮಂಗಳೂರಿನ ಕಡಲ ತೀರದಲ್ಲಿ ರಾಶಿ ರಾಶಿ ಮೀನುಗಳು
ಮಂಗಳೂರಿನ ಕಡಲ ತೀರದಲ್ಲಿ ರಾಶಿ ರಾಶಿ ಮೀನುಗಳು
ಮಂಗಳೂರು ನವೆಂಬರ್ 22: ಮಂಗಳೂರಿನ ಕಡಲ ತೀರದಕ್ಕೆ ರಾಶಿ ರಾಶಿ ಮೀನುಗಳು ಬಂದಿವೆ. ಆದರೆ ಸತ್ತು ಬಿದ್ದ ಮೀನುಗಳು ಅಲ್ಲ ಇವು ಜೀವಂತ ಇರುವ ಮೀನುಗಳು ಕಡಲ ತೀರದ ಅಲೆಗಳೊಂದಿಗೆ ಆಟವಾಡುತ್ತಾ ಇರುವ ಸನ್ನಿವೇಶ.
ಮಂಗಳೂರಿನಲ್ಲಿ ಭೂತಾಯಿ ಅಥವ ಮತ್ತಿ ಎಂದು ಕರೆಯಲ್ಪಡುವ ಸಾರ್ಡಿನ್ ಮೀನು ಉಳ್ಳಾಲದ ಕಡಲ ಕರೆಗೆ ಬಂದಿದೆ ಇವತ್ತು ಬೆಳಗಿನ ಜಾವ ಕಡಲ ಬದಿಯಲ್ಲಿ ವಾಕಿಂಗ್ ಗೆ ಹೋದ ಜನರು ಈ ವಿಚಿತ್ರ ಘಟನೆಗೆ ಸಾಕ್ಷಿಯಾದರು.
ಇಂತಹ ಘಟನೆ ಕೆಲವೊಮ್ಮೆ ಆಗುತ್ತಾ ಇರುತ್ತದೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಯಾವುದೋ ಅಪಾಯದ ಮುನ್ಸೂಚನೆ ಎಂದು ಹೇಳುತ್ತಾರೆ. ಮೀನುಗಾರರ ಪ್ರಕಾರ ಗುಂಪಿನಲ್ಲಿ ಹೋಗುವ ಮೀನು ದಾರಿ ತಪ್ಪಿ ತೀರದ ದಿಕ್ಕು ಹಿಡಿದಾಗ ಕೊನೆಗೆ ತೆರೆಯ ಅಬ್ಬರಕ್ಕೆ ಸಿಲುಕಿ ಈ ರೀತಿಯಲ್ಲಿ ಆಗುತ್ತದೆ ಎಂದು ಹೇಳುತ್ತಾರೆ. ಅಲ್ಲದೇ ಇದು ಮೀನುಗಾರಿಕೆಗೆ ಶುಭ ಶಕುನ ಎಂದು ಕೆಲವರ ನಂಬಿಕೆಯಾಗಿದೆ.
ತಾಜಾ ತಾಜಾ ಭೂತಾಯಿ ಮೀನನ್ನುನೋಡಿದವರು ಚೀಲಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ಸನ್ನಿವೇಶ ಈ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಿದೆ.
ಮದುವೆ ಮನೆಯಲ್ಲಿ ಉಂಡವನೆ ಜಾಣ ಎಂದು ಹೇಳುವ ಹಾಗೆ ನಂಬಿಕೆ ಮೂಡ ನಂಬಿಕೆಯ ನಡುವೆ ತಾಜ ತಾಜ ಭೂತಾಯಿ ಹಿಡಿದು ಮನೆಗೆ ಕೊಂಡು ಹೋದವರೆ ಜಾಣರು.