LATEST NEWS
ಬಿಎಸ್ ವೈ ವಿರುದ್ದ ಪ್ರಕರಣ ದಾಖಲು, ಕಾಂಗ್ರೆಸ್ ಪಾತ್ರವಿಲ್ಲ : ಐವನ್ ಡಿಸೋಜಾ ಸ್ಪಷ್ಟನೆ
ಮಂಗಳೂರು, ಆಗಸ್ಟ್ 20 : ಡಿನೋಟಿಫಿಕೇಶನ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ವಿರುದ್ಧ ಭ್ರಷ್ಟಚಾರ ನಿಗ್ರಹ ದಳ (ACB) ಪ್ರಕರಣ ದಾಖಲು ಮಾಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಕಾಂಗ್ರೆಸ್ ಮುಖಂಡ ಐವನ್ ಡಿ ಸೋಜಾ ಹೇಳಿದ್ದಾರೆ. ಮಂಗಳೂರಿಲ್ಲಿ ಮಾದ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಸರಕಾರ ಈ ಪ್ರಕರಣದಲ್ಲಿ ಸುಮೋಟೋ ಕೇಸು ದಾಖಲಿಸಿದ್ದೂ ಅಲ್ಲ ,ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧಾರಿಸಿ ಎಸಿಬಿ ಬಿಎಸ್ ಯಡಿಯೂರಪ್ಪ ವಿರುದ್ಧ ಕೇಸು ದಾಖಲಿಸಿ, ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗಿದೆ. ಎಸಿಬಿ ಯಲ್ಲಿ ದಾಖಲಾಗುವ ಕೇಸುಗಳಿಗೂ,ಸಿಎಂ ಸಿದ್ದರಾಮಯ್ಯರಿಗೂ ಯಾವುದೇ ಸಂಬಂಧವಿಲ್ಲ ಆದರೂ ಸಿ ಎಂ ಹೆಸರನ್ನು ಇಲ್ಲಿ ತಳಕು ಹಾಕಲಾಗುತ್ತಿದೆ. ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಹಿಸಲಾಗದೆ ಹತಾಶರಾಗಿ ಸಿ ಎಂ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದ ಅವರು ಕಾಂಗ್ರೆಸ್ ಎಂದೂ ದ್ವೇಷ ರಾಜಕಾರಣ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಜನರ ಸಮಸ್ಯೆಗಳ ಬಗ್ಗೆ ವಿಪಕ್ಷವಾಗಿ ಬಿಜೆಪಿ ಎಂದೂ ಮಾತನಾಡಿಲ್ಲ ಎಂದ ಅವರು ಪ್ರತಿಭಟನೆ ಹೆಸರಲ್ಲಿ ಬಿಜೆಪಿ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ಆರೋಪಿದ ಐವನ್ ಬಿಜೆಪಿ ಗೆ ಜೈಲು-ಬೇಲು ಎಲ್ಲವೂ ಮಾಮುಲು ಎಂದು ವ್ಯಂಗ್ಯವಾಡಿದರು.