LATEST NEWS
ಪ್ರಿಯಕರನ ಅಗಲಿಕೆಯಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಿಯಕರನ ಅಗಲಿಕೆಯಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು ಜನವರಿ 1 : ಪ್ರಿಯಕರ ಅಗಲಿಕೆಯಿಂದ ಮನನೊಂದ ವಿಧ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ, ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿಯನ್ನು ರುಬೀನ (17) ಎಂದು ಗುರುತಿಸಲಾಗಿದೆ.
ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಚೆಂಬುಗುಡ್ಡೆಯ ಮನೆಯಲ್ಲಿ ಈ ಘಟನೆ ನಡೆದಿದೆ. ತೊಕ್ಕೊಟ್ಟಿನ ಮಂಗಳೂರು ವನ್ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ಕಲಿಯುತ್ತಿರುವ ರುಬೀನ ಅರ್ಫಾಜ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಈ ಇಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು. ಈ ನಡುವೆ ಇಬ್ಬರ ಪ್ರೀತಿ ವಿಚಾರ ತಿಳಿದ ಅರ್ಫಾಜ್ ತಂದೆ ಅರ್ಫಾಜ್ ಗೆ ಬುದ್ದಿವಾದ ಹೇಳಿದ್ದರು. ತಂದೆ ಬೈದರೆಂದು ತಿಳಿದು ಅರ್ಫಾಜ್ ನವೆಂಬರ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಿಯಕರ ಆತ್ಮಹತ್ಯೆಯಿಂದ ಮನನೊಂದ ರುಬೀನ ತನ್ನ ತೊಕ್ಕೊಟ್ಟಿನ ಚೆಂಬುಗಡ್ಡೆಯ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.