Connect with us

DAKSHINA KANNADA

ಪರಿಸರ ಗಣೇಶ ; ಪ್ರಕೃತಿ ಉಳಿಸಲು ಎನ್ ಸಿ ಎಫ್ ನಿಂದ ನೂತನ ಅವಿಷ್ಕಾರ

ಮಂಗಳೂರು, ಆಗಸ್ಟ್ 18 : ನಗರಗಳಲ್ಲಿ ಗಣಪತಿ ವಿಸರ್ಜಿಸುವುದು ಕಷ್ಟ, ಸಾರ್ವಜನಿಕ ಗಣೇಶ ಉತ್ಸವ ಸಂದರ್ಭದಲ್ಲಿ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಈ ಬಾರಿಯ ಹಬ್ಬವನ್ನು ಪರಿಸರ ಪೂರಕವಾಗಿ ಸಲು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ತೀರ್ಮಾನಿಸಿದೆ ಪರಿಸರ ರಕ್ಷಣೆಯ ಜತೆಗೆ ಗಿಡಮರ ಬೆಳೆಸಲು ಈ ಯೋಜನೆ ಸಹಕಾರಿಯಾಗಿದೆ. ಗಣೇಶನ ವಿಗ್ರಹದ ಗಿಡವನ್ನು ಇರಿಸಬಹುದು ಮೂರ್ತಿಯಲ್ಲಿ ಔಷಧಿಯ ಗಿಡ, ಗಂಧದ ಗಿಡ, ಚಂದನ ಅಥವಾ ಆಯ್ಕೆಯ ಹಣ್ಣಿನ ಗಿಡವನ್ನು ಸೇರಿಸಬಹುದು .ಗಣೇಶನ ವಿಗ್ರಹವನ್ನು ಪೂಜಿಸಿದ ಬಳಿಕ ಮೂರ್ತಿ ಮುಳುಗುವಂತೆ ಹೊಂಡ ಮಾಡಿ ನೀರು ತುಂಬಿಸಬೇಕು ಬಳಿಕ ಅದರಲ್ಲಿ ವಿಗ್ರಹವನ್ನು ವಿಸರ್ಜಿಸಬೇಕು ಮೂರ್ತಿ ಯಲ್ಲಿದ್ದ ಹಾಗೇ ಮಣ್ಣಿನಲ್ಲಿ ಉಳಿದುಕೊಂಡು ಗಿಡ ಬೆಳೆಯುತ್ತದೆ ಎಂನ್ನುತ್ತಾರೆ ರಾಷ್ಟ್ರೀಯ ಪರಿಸರ ಸಂರಕ್ಷನಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ. ಜೇಡಿಮಣ್ಣಿನಿಂದ ಗಣೇಶನನ್ನು ತಯಾರಿಸಿ ಅದಕ್ಕೆ ಪ್ರಕೃತಿ ಸಹಜ ಬಣ್ಣ ಬಳಿದು ಮೂರ್ತಿಯಲ್ಲಿ ಗಿಡ ಸೇರಿಸಿ ಗಣೇಶನನ್ನು ತಯಾರಿಸುವ ವಿಶಿಷ್ಟ ಕಾರ್ಯಕ್ಕೆ ಒಕ್ಕೂಟ ಮುಂದಾಗಿದೆ ಪೂಜೆಯ ಬಳಿಕ ಗಣೇಶ ವಿಸರ್ಜನೆಯನ್ನು ಸಣ್ಣ ನೀರಿನ ಹೊಂಡದಲ್ಲಿ ವರ್ತಿಸಬಹುದು ಅದರಲ್ಲಿರುವ ಗಿಡವನ್ನು ಬೆಳೆಸುವ ಮೂಲಕ ಪ್ರಕೃತಿಗೆ ವಿಶೇಷ ಕೊಡುಗೆ ನೀಡಬಹುದು ಹೀಗೆ ಬೆಳೆದ ಗಿಡವನ್ನು ಜನ ಭಕ್ತಿಯಿಂದ ದೇವರ ಮರ ಗಣೇಶನ ವಿಗ್ರಹದಲ್ಲಿ ಪೂಜಿಸಿ ನೆಟ್ಟ ಗಿಡ ಎಂಬ ಭಾವನೆಯಿಂದ ತಡೆಯಲಾರದು ದೇವರ ಪೂಜೆ ಜತೆ ಪರಿಸರ ಸಂರಕ್ಷಣೆ ಕಾರು ಈ ಮೂಲಕ ಆಗುತ್ತದೆಂದು ಇದು ಒಕ್ಕೂಟದ ದೂರದೃಷ್ಟಿ ಯೋಜನೆಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *