LATEST NEWS
ದಲಿತರು ಸ್ವಾಭಿಮಾನಿ ಹಿಂದೂಗಳು – ಪ್ರವೀಣ್ ಭಾಯ್ ತೊಗಾಡಿಯಾ

ದಲಿತರು ಸ್ವಾಭಿಮಾನಿ ಹಿಂದೂಗಳು – ಪ್ರವೀಣ್ ಭಾಯ್ ತೊಗಾಡಿಯಾ
ಉಡುಪಿ ನವೆಂಬರ್ 25: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಎರಡನೇ ದಿನದ ಅಧಿವೇಶನಕ್ಕೆ ಚಾಲನೆ ನೀಡಲಾಗಿದೆ. ಇಂದಿನ ಅಧಿವೇಶನದಲ್ಲಿ ಅಸ್ಪೃಶ್ಯತಾ ನಿವಾರಣೆ, ಮತಾಂತರ, ಘರ್ ವಾಪ್ಸೀ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಅಧಿವೇಶನದ ದಿಕ್ಸೂಚಿ ಭಾಷಣ ಆರಂಭಿಸಿದ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ, ಅಸ್ಪೃಶ್ಯತೆ ವೇದ ಸಮ್ಮತವಲ್ಲ, ವೇದದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ ಈ ಹಿನ್ನಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದರೆ ಅದು ವೇದಕ್ಕೆ ಅಪಮಾನ, ಸನಾತನ ಧರ್ಮಕ್ಕೆ ಅಪಮಾನ ಮಾಡಿದಂತೆ ಎಂದರು.

ಮುಸ್ಲಿಂ ದೊರೆಗಳ ದಾಳಿಯಲ್ಲಿ ಸೋತವರು ದಲಿತರಾದರು, ಆದರೂ ದಲಿತರು ಸ್ವಾಭಿಮಾನಿಗಳಂತೆ ಹಿಂದೂ ಧರ್ಮದಲ್ಲಿ ಉಳಿದರು, ಎಲ್ಲರಲ್ಲೂ ಭಗವಂತ ಇರುವಾಗ ದಲಿತರಲ್ಲಿ ಯಾಕೆ ಇಲ್ಲ ಎಂದು ಪ್ರಶ್ನಿಸಿದರು. ಉಡುಪಿಯ ಧರ್ಮ ಸಂಸದ್ ನಂತರ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇಲ್ಲವಾಗಲಿ ಎಂದು ಅವರು ಹೇಳಿದರು.