Connect with us

LATEST NEWS

ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರ ಚಾತುರ್ಮಾಸ ದಿಗ್ವಿಜಯ ಮಹೋತ್ಸವ

ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರ ಚಾತುರ್ಮಾಸ ದಿಗ್ವಿಜಯ ಮಹೋತ್ಸವ

ಮಂಗಳೂರು ಅಕ್ಟೋಬರ್ 18: ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವೃತವು ಕೊಂಚಾಡಿ ಶ್ರೀ ಕಾಶೀಮಠದಲ್ಲಿ ಸಂಪನ್ನಗೊಂಡಿದ್ದು ಆ ಪ್ರಯಕ್ತ “ಚಾತುರ್ಮಾಸ ದಿಗ್ವಿಜಯ” ಮಹೋತ್ಸವವನ್ನು ಇದೇ ಬರುವ ಶನಿವಾರ ದಿನಾಂಕ :21-10-2017 ರಂದು ಕೊಂಚಾಡಿ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಶ್ರೀಗಳವರ ದಿಗ್ವಿಜಯ ಮಹೋತ್ಸವವು ಕೊಂಚಾಡಿ ಶ್ರೀ ಕಾಶೀಮಠದಿಂದ ಸಾಯಂಕಾಲ 6.00 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಸುಮಾರು 25 ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳ,ಕೇರಳದ ವಿಶೇಷ ಚಂಡೆ ವಾದನ,ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ,ಹುಲಿವೇಷ,ಸ್ತಬ್ಧಚಿತ್ರಗಳು ದಿಗ್ವಿಜಯ ಯಾತ್ರೆಯಲ್ಲಿಪಾಲ್ಗೋಳ್ಳಲಿರುವುರು.ದಿಗ್ವಿಜಯ ಯಾತ್ರೆ ನಡೆಯುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ,ತಳಿರು ತೋರಣಗಳಿಂದ ಅಲಂಕರಿಸಲಾಗುವುದು.

ಊರು ಪರವೂರುಗಳಿಂದ ಸಾವಿರಾರು ಜಿ.ಎಸ್.ಬಿ ಸಮಾಜ ಭಾಂಧವರು,ದೇವಳದ ಆಡಳಿತ ಮಂಡಳಿಯ ಪದಾದಿಕಾರಿಗಳು,ವಿವಿಧ ಭಜನಾಮಂಡಳಿಗಳು ಪಾಲ್ಗೋಳ್ಳೂವರು.ಸಮಾಜದ ದೇವಳಗಳ ಆಡಳಿತ ಮಂಡಳಿಯ ಪರವಾಗಿ ಶ್ರೀಗಳವರಿಗೆ ಹಾರಾರರ್ಪಣೆಗೆ ಅವಕಾಶವಿರುವುದು.ನೆರೆದ ಸ್ವಸಮಾಜ ಭಾಂದವರಿಗೆ ಶ್ರೀಗಳವರ ದಿವ್ಯ ಹಸ್ತಗಳಿಂದ ಮಂತ್ರಾಕ್ಷತೆಯು ಪದವಿನಂಗಡಿ ಕಟ್ಟೆ ಹಾಗೂ ಮೇರಿ ಹಿಲ್ ಪ್ರದೇಶದಲ್ಲಿ ನೀಡಲು ಶ್ರೀಗಳವರಲ್ಲಿ ವಿನಂತಿಸಲಾಗಿದೆ.

ದಿಗ್ವಿಜಯ ಯಾತ್ರೆಯು ಕೊಂಚಾಡಿ ದೇವಳದಿಂದ ಪ್ರಾರಂಭಗೊಂಡು,ಪದವಿನಂಗಡಿ,ಏರ್‍ಪೋರ್ಟ ರಸ್ತೆ ಮೂಲಕ ಹಾದು ಮೇರಿಹಿಲ್ ಮೂಲಕ ಶ್ರೀದೇವಳಕ್ಕೆ ಹಿಂತಿರುಗಲಿರುವುದು.ಈ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಊಟ,ಉಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ದಿಗ್ವಿಜಯ ಯಾತ್ರೆಗೆ ಆಗಮಿಸಲಿರುವ ಎಲ್ಲಾ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಡಿ.ಐ.ಜಿ.ಬಂಗ್ಲೆಯ ಪಕ್ಕದಲ್ಲಿರುವ ಮೈದಾನ, ವಿಕಾಸ್ ಕಾಲೇಜು ಮೈದಾನ ಹಾಗೂ ಅಬಕಾರಿ ಇಲಾಖೆಯ ಕಛೇರಿಯ ಪಕ್ಕದಲ್ಲಿರುವ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ದಿಗ್ವಿಜಯಕ್ಕೆ ಆಗಮಿಸಿದ ಸಮಾಜ ಭಾಂದವರಿಗೆ ಕಾರ್ಯಕ್ರಮ ಮುಗಿದ ಬಳಿಕ ಮಂಗಳೂರು ನಗರ ಹಾಗೂ ಕೋಡಿಕಲ್ ಪ್ರದೇಶಕ್ಕೆ ತೆರಳುವವರಿಗೆ ಉಚಿತ ಬಸ್ ವ್ಯವಸ್ಥೆ ಕೊಂಚಾಡಿಯಿಂದ ಮಾಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *