Connect with us

    DAKSHINA KANNADA

    ಕಡಬದಲ್ಲೊಬ್ಬ ಮರಗಳ್ಳ ಕಾಂಗ್ರೇಸ್ ಮುಖಂಡ, ಇವನ ಬೆನ್ನಿಗಿದೆ ಅರಣ್ಯ ಸಚಿವರ ತಂಡ

    ಕಡಬದಲ್ಲೊಬ್ಬ ಮರಗಳ್ಳ ಕಾಂಗ್ರೇಸ್ ಮುಖಂಡ, ಇವನ ಬೆನ್ನಿಗಿದೆ ಅರಣ್ಯ ಸಚಿವರ ತಂಡ

    ಪುತ್ತೂರು, ಅಕ್ಟೋಬರ್ 18: ಮರ ಉಳಿಸಿ, ಕಾಡು ಬೆಳೆಸಿ ಎಂದು  ಸಿಕ್ಕಲ್ಲಿ ವೇದವಾಕ್ಯ ನುಡಿಯುವ ಅರಣ್ಯ ಸಚಿವ ಬಿ.ರಮಾನಾಥ ರೈಗಳೇ ತನ್ನ ಬೆಂಬಲಿಗರಿಗೋಸ್ಕರ ಮರ ಕಳ್ಳತನದ ವಿಚಾರದಲ್ಲಿ ಕೊಂಚ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ಕಾಡುಗಳಲ್ಲಿ ಮರಗಳ್ಳರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಸೂಕ್ತ ಸಾಕ್ಷವೆಂಬಂತೆ ಈ ಹಿಂದೆಯೇ ಬಂಟ್ವಾಳದ ನರಿಕೊಂಬಿನ ಮರಗಳ್ಳ ಕಾಂಗ್ರೇಸ್ ಮುಖಂಡನೊಬ್ಬ ಮರದ ವ್ಯಾಪಾರಿಯೊಂದಿಗೆ ನಡೆಸುತ್ತಿರುವ ಫೋನ್ ಸಂಭಾಷಣೆಯ ರೂಪದಲ್ಲಿ ಪತ್ತೆಯಾಗಿದೆ. ಇದೀಗ ಪುತ್ತೂರು ತಾಲೂಕಿನ ಕಡಬ ಸಮೀಪದ ರಾಮಕುಂಜದ ಸಂಪ್ಯಾಡಿ ಎಂಬಲ್ಲಿರುವ ಅರಣ್ಯ ಪ್ರದೇಶದಿಂದ ಅರಣ್ಯ ಸಚಿವರ ಆಪ್ತ ಶಿಷ್ಯ , ಇನ್ನೊಬ್ಬ ಮರಗಳ್ಳ ಯತೀಶ್ ಬಾನಡ್ಕ ಮರ ಕದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈತ ಸಂಪ್ಯಾಡಿಯ ಎಲ್ಯಣ್ಣ ಗೌಡ ಎಂಬವರು ತಮ್ಮ ಜಾಗವೆಂದು ಹೇಳಿಕೊಂಡು ಬರುತ್ತಿರುವ ಅರಣ್ಯ ಭೂಮಿಯಲ್ಲಿದ್ದ 17 ಬೆಲೆ ಬಾಳುವ ಮರ ಹಾಗೂ 35 ಇತರೆ ಮರಗಳನ್ನು ರಾತ್ರೋರಾತ್ರಿ ಕದ್ದು ಸಾಗಿಸಿದ್ದಾನೆ. ಬೆಲೆ ಬಾಳುವ 17 ಮರಗಳ ಪ್ರತಿಯೊಂದರ ಮೌಲ್ಯ 2 ರಿಂದ 3 ಲಕ್ಷ ರೂಪಾಯಿಗಳಷ್ಟಾಗಿದ್ದು, ಈ ಮರಗಳನ್ನು ಈ ಮರಗಳ್ಳ ಎಲ್ಲಿ ಸಾಗಿಸಿದ್ದಾನೆ ಎನ್ನುವುದು ಅರಣ್ಯ ಇಲಾಖೆಗೂ ಇಷ್ಟರವರೆಗೂ ಗೊತ್ತಾಗಿಲ್ಲ. ಈತನ ಮರಗಳ್ಳತನ ಸಿಕ್ಕಿಬೀಳಲೂ ಒಂದು ಕಾರಣವಿದೆ. ಈತ ತನ್ನ ಸಹಚರರೊಂದಿಗೆ ಮರಗಳನ್ನು ಕಡಿಯುತ್ತಿದ್ದ ಸಂದರ್ಭದಲ್ಲಿ ಮರವೊಂದು ವಿದ್ಯುತ್ ತಂತಿಗೆ ಬಿದ್ದು ತಂತಿ ತುಂಡಾಗುವುದರ ಜೊತೆಗೆ ಎರಡು ವಿದ್ಯುತ್ ಕಂಬಗಳೂ ಧರೆಗುರುಳಿದ್ದವು. ಮಳೆ-ಗಾಳಿ ಇಲ್ಲದಿದ್ದರೂ ವಿದ್ಯುತ್ ಕಂಬ ಬೀಳಲು ಕಾರಣವೇನೆಂದು ಸ್ಥಳೀಯ ಗ್ರಾಮಸ್ಥರು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಪ್ಯಾಡಿ ಅರಣ್ಯದಲ್ಲಿ ಮರಗಳ ಮಾರಣಹೋಮ ನಡೆಯುತ್ತಿರುವ ವಿಚಾರ ತಿಳಿದು ಬಂದಿದೆ. ಸ್ಥಳೀಯರ ದೂರಿನ ಮೇರೆಗೆ ಯತೀಶ್ ಬಾನಡ್ಕ ನ ಮರದ ಮಿಲ್ ಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆಲವು ಗೆದ್ದಲು ಹಿಡಿದ ಮರಗಳನ್ನು ಮಾತ್ರ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಬೆಲೆ ಬಾಳುವ ಮರಗಳನ್ನು ಕದ್ದಿರುವ ಈ ಮರಗಳ್ಳ ಆ ಮರಗಳನ್ನು ಎಲ್ಲಿಗೆ ಸಾಗಿಸಿದ್ದಾನೆ ಎನ್ನುವ ತನಿಖೆಯ ಗೋಜಿಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹೋಗದಿರುವುದರ ಹಿಂದೆ ಮರಗಳ್ಳನ ಗುರುವಿನ ಆದೇಶವಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ಉದ್ಧೇಶದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮರಗಳ್ಳ ತನ್ನ ಮರದ ಮಿಲ್ ನಲ್ಲಿ ಕಾನೂನು ಬಾಹಿರವಾಗಿ ಇರಿಸಿಕೊಂಡಿದ್ದ ಮರ ಕತ್ತರಿಸುವ ದೊಡ್ಡ ಯಂತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಸಾಗಿಸಿದ ಯತ್ನೀಶ್ ಬಾನಡ್ಕ ಮಾತ್ರ ಈಗಲೂ ಆರಾಮವಾಗಿ ತಿರುಗಾಡಿಕೊಂಡಿರುವುದು ಜಿಲ್ಲೆಯಲ್ಲಿ ಕಳ್ಳರಿಗೂ ಭಾಗ್ಯ ದೊರೆತಿದೆಯೇ ಎನ್ನುವ ಗೊಂದಲ ಮೂಡುವಂತೆ ಮಾಡಿದೆ. ಅಂದ ಹಾಗೆ ಈ ಮರಗಳ್ಳನ ಜೊತೆಗೆ ರವೂಫ್ ಮತ್ತು ಗಫೂರ್ ಎನ್ನುವ ದಲ್ಲಾಳಿಗಳೂ ಸೇರಿಕೊಂಡಿದ್ದು, ಎಲ್ಲರಿಗೂ ಇದೀಗ ಅರಣ್ಯ ಸಚಿವರಿಂದಾಗಿ ಬಿಗಿ ರಿಲೀಫ್ ಸಿಕ್ಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply