Connect with us

    LATEST NEWS

    ಗೋವಾದಲ್ಲಿ ಸೋನಿಯಾಗಾಂಧಿ ಸೈಕಲ್ ಸವಾರಿ

    ಗೋವಾದಲ್ಲಿ ಸೋನಿಯಾಗಾಂಧಿ ಸೈಕಲ್ ಸವಾರಿ

    ಗೋವಾ ಡಿಸೆಂಬರ್ 28: ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಮಗ ರಾಹುಲ್ ಗಾಂಧಿಯವರಿಗೆ ಹಸ್ತಾಂತರಿಸಿದ ನಂತರ ಸೋನಿಯಾ ಗಾಂಧಿ ವಿಶ್ರಾಂತಿಗಾಗಿ ಗೋವಾಗೆ ತೆರಳಿದ್ದಾರೆ. ಈ ನಡುವೆ ಗೋವಾದಲ್ಲಿ ಮಾಜಿ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಆರಾಮವಾಗಿ ಸೈಕಲ್ ಸವಾರಿ ನಡೆಸುತ್ತಿರುವುದು ಗೋವಾದಲ್ಲಿ ಕಂಡು ಬಂದಿದೆ.

    ಎಐಸಿಸಿ ಅಧ್ಯಕ್ಷೆಯಾಗಿ 19 ವರ್ಷ ಅಧಿಕಾರದಲ್ಲಿದ್ದ ಸೋನಿಯಾ ಗಾಂಧಿ, ಡಿಸೆಂಬರ್ 16ರಂದು ಅಧ್ಯಕ್ಷ ಸ್ಥಾನವನ್ನು ರಾಹುಲ್‌ ಗಾಂಧಿಗೆ ಬಿಟ್ಟುಕೊಟ್ಟಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ವಿಶ್ರಾಂತಿಗಾಗಿ ಡಿಸೆಂಬರ್ 26ರಂದು ದೆಹಲಿಯಿಂದ ಗೋವಾಗೆ ತೆರಳಿದ್ದರು.

    ಮಗನಿಗೆ ಅಧ್ಯಕ್ಷ ಜವಾಬ್ದಾರಿ ನೀಡಿ ಸೋನಿಯಾ ಸೈಕಲ್‌ ಸವಾರಿ ನಡೆಸುತ್ತಿರುವ ಚಿತ್ರಗಳು ವೈರಲ್ ಆಗಿದೆ. ಇದೀಗ 71 ವರ್ಷದ ಸೋನಿಯಾ ಗಾಂಧಿ ಸೈಕಲ್ ತುಳಿಯುತ್ತಿರುವ ಮತ್ತು ಪ್ರವಾಸಿಗರೊಂದಿಗೆ ತೆಗೆದಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

     

    Share Information
    Advertisement
    Click to comment

    You must be logged in to post a comment Login

    Leave a Reply