LATEST NEWS
ಮಂಗಳೂರಿನಲ್ಲೊಂದು ಡ್ರಗ್ಸ್ ಜಿಹಾದ್
ಮಂಗಳೂರಿನಲ್ಲೊಂದು ಡ್ರಗ್ಸ್ ಜಿಹಾದ್
ಮಂಗಳೂರು ನವೆಂಬರ್ 30: ಡ್ರಗ್ಸ್ ಜಿಹಾದ್ ಗೆ ಬಲಿಯಾಗಿದ್ದ ಯುವತಿಯೊಬ್ಬಳನ್ನು ಹಿಂದೂ ಜಾಗರಣ ವೇದಿಕೆ ಹಾಗು ದುರ್ಗಾವಾಹಿನಿಯ ಸದಸ್ಯರು ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪ್ರತಿಷ್ಟಿತ ಕಾಲೇಜಿನ ಯುವತಿಯೊಬ್ಬಳು ಬಂದರ್ ನ ಡ್ರಗ್ಸ್ ಸ್ಮಗ್ಲರ್ ಅಮೀರ್ ಸುಹೇಲ್ ಎಂಬಾತನ ಪ್ರೀತಿಯ ಜಾಲದಲ್ಲಿ ಸಿಲುಕಿದ್ದಳು. ಯುವತಿಗೆ ಡ್ರಗ್ಸ್ ನ ಚಟ ಅಂಟಿಸಿದ್ದ ಅಮೀರ್ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಕೆಡವಿದ್ದ ಎಂದು ಹೇಳಲಾಗಿದೆ.
ಈ ಇಬ್ಬರು ಎಷ್ಟು ಮುಂದುವರೆದಿದ್ದರು ಎಂದರೆ ಯುವತಿ ತನ್ನ ಪೋಷಕರನ್ನು ತೊರೆದು ಡ್ರಗ್ಸ್ ಮಾರಾಟಗಾರ ನೊಂದಿಗೆ ತೆರಳಲು ಸಿದ್ದಳಿದ್ದಳು. ಈ ಕುರಿತ ಪೋಟೋ ಹಾಗು ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರು ಕಳೆದ ಏಕಾಂತದ ಕ್ಷಣಗಳ ಪೋಟೊ ಗಳನ್ನು ಕೂಡ ಸಾಮಾಜಿಕ ಜಾಲತಾಣ ದಲ್ಲಿ ಹರಿಬಿಡಲಾಗಿತ್ತು.
ಆದರೆ ಇತ್ತೀಚೆಗೆ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆ ನಡೆಸಿ ಗಾಂಜಾ ಸಾಗಿಸುತ್ತಿದ್ದ ಅಮೀರ್ ಸುಹೇಲ್ ನನ್ನು ಬಂಧಿಸಿದ್ದಾರೆ. ಬಂಧಿತ ಅಮೀರ್ ಸುಹೇಲ್ ನಿಂದ ಇನ್ನಿತರ ಮಾದಕ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿತ್ತು.
ಈ ಕುರಿತು ಮಾಹಿತಿ ಪಡೆದಿದ್ದರೂ ಯುವತಿ ಅಮೀರ್ ಸುಹೇಲ್ ನೊಂದಿಗೆ ತೆರಳಲು ರೆಡಿಯಾಗಿದ್ದಳು ಎಂದು ಹೇಳಲಾಗಿದೆ.
ಈ ಯುವತಿಯ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಹಾಗು ದುರ್ಗಾವಾಹಿನಿಯ ಸದಸ್ಯರು ಯುವತಿಗೆ ತಿಳಿಹೇಳಿ ಜೀವನದ ವಾಸ್ತವಿಕತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ತನ್ನ ಪೋಷಕರಒಂದಿಗೆ ತೆರಳಲು ಒಪ್ಪಿಕೊಂಡಿದ್ದು ಆಕೆ ಯನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ.
ಈ ನಡುವೆ ಸಾಮಾಜಿಕ ಜಾಲತಾಣ ದಲ್ಲಿ ಹರಿದಾಡುತ್ತಿರುವ ಯುವತಿ ಯಾರೆಂಬುದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ ಆದರೆ ಹಿಂದು ಜಾಗರಣ ವೇದಿಕೆಯ ಒಂದು ಎಡವಟ್ಟಿನಿಂದ ಆ ಯುವತಿ ಯಾರೆಂಬುದು ಈಗ ಜಗಜ್ಜಾಹಿರವಾದಂತಾಗಿದೆ. ಇಂತಹ ವಿಚಾರ ಗಳನ್ನು ಗೋಪ್ಯವಾಗಿಯೇ ಪರಿಹರಿಸ ಬೇಕೆಂಬ ಸಾಮಾನ್ಯ ಜ್ಞಾನ ಕೂಡ ಹಿಂದೂ ಜಾಗರಣಾ ವೇದಿಕೆ ಸೇರಿದಂತ ದುರ್ಗಾವಾಹಿನಿ ಮುಖಂಡರಿಗೆ ಇರದಿರುದರ ಬಗ್ಗೆ ಈಗ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈಗ ಯುವತಿಯ ಭವಿಷ್ಯದ ಕತೆಯೇನು ಎಂಬ ಪ್ರಶ್ನೆ ಮೂಡಿದ್ದು ಹಿಂದೂ ಜಾಗರಣಾ ವೇದಿಕೆ ಸೀರಿದಂತೆ ದುರ್ಗಾವಾಹಿನಿ ಮುಖಂಡರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ಈ ಎಲ್ಲಾ ಕಾರ್ಯಗಳನ್ನು ಗೋಪ್ಯತೆಯಲ್ಲಿ ಇರಿಸದೇ ಜಗಜ್ಜಾಹಿರ ಗೊಳಿಸಿರುವುದು ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ದುರ್ಗಾವಾಹಿನಿ ಮುಖಂಡರ ಪ್ರಚಾರಕ್ಕಾಗಿ ಎಂದು ಆರೋಪಿಸಲಾಗಿದೆ.
ಈ ಡ್ರಗ್ಸ್ ಜಿಹಾದ್ ಗೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ನೂರಾರು ವಿಧ್ಯಾರ್ಥಿಗಳು ಅದರಲ್ಲೂ ವಿಧ್ಯಾರ್ಥಿನಿಯರು ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಯುವತಿಯರನ್ನು ಡ್ರಗ್ಸ್ ಜಾಲಕ್ಕೆ ಸಿಲುಕಿಸಿ ಅವರನ್ನು ಬಳಸಿಕೊಳ್ಳುವ ಜಾಲ ಇದಾಗಿದ್ದು ಇದಕ್ಕೆ ಕಡಿವಾಣ ಹಾಕಲು ಹಿಂದೂ ಸಂಘಟನೆಗಳು ಈಗ ಎಚ್ಚೆತ್ತುಕೊಂಡಿವೆ. ಮುಂಬರುವ ದಿನಗಳಲ್ಲಿ ಈ ಡ್ರಗ್ಸ್ ಜಿಹಾದ್ ವಿರುದ್ದ ಸಮರ ಸಾರಲು ಹಿಂದೂ ಸಂಘಟನೆಗಳೂ ತಂತ್ರ ರೂಪಿಸುತ್ತಿವೆ.