LATEST NEWS
ಕೊಲ್ಲೂರಿನಿಂದ ನಿರ್ಗಮಿಸಿದ ಶ್ರೀಲಂಕಾ ಪ್ರಧಾನಿ

ಕೊಲ್ಲೂರಿನಿಂದ ನಿರ್ಗಮಿಸಿದ ಶ್ರೀಲಂಕಾ ಪ್ರಧಾನಿ
ಉಡುಪಿ ನವೆಂಬರ್ 21: ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಕೊಲ್ಲೂರಿನಿಂದ ನಿರ್ಗಮಿಸಿದ್ದಾರೆ.
ಕುಟುಂಬ ಸಮೇತರಾಗಿ ಕೊಲ್ಲೂರಿನ ಬೇಟಿ ನೀಡಿದ ಶ್ರೀಲಂಕಾ ಪ್ರಧಾನಿ, ದೇವಿಯ ದರ್ಶನ ಪಡೆದರು. ನಂತರ ಶತಚಂಡಿಕಾಯಾಗದಲ್ಲಿ ಭಾಗಿಯಾದರು. ನಂತರ ದೇವಿಗೆ ವಿಶೇಷ ಪೂಜೆಯನ್ನು ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಸಲ್ಲಿಸಿದರು.
ಕೊಲ್ಲೂರಿನ ದೇವರ ದರ್ಶನದ ನಂತರ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಶ್ರೀಲಂಕಾ ಪ್ರಧಾನಿಯವರು ನಿರ್ಗಮನಿಸಿದರು.
