Connect with us

    LATEST NEWS

    ಕೃಷ್ಣ ಮಠಕ್ಕೆ ಆಗಮಿಸಿದ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

    ಕೃಷ್ಣ ಮಠಕ್ಕೆ ಆಗಮಿಸಿದ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ

    ಉಡುಪಿ ನವೆಂಬರ್ 12: ಮೊದಲ ಬಾರಿ ಉಡುಪಿಗೆ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಆಗಮಿಸಿದ್ದಾರೆ. ಉಡುಪಿಯಲ್ಲಿ ನಡೆಯುತ್ತಿರುವ ಹಾಲು ಮತ ಸಭಾದ ವತಿಯಿಂದ ರಾಜ್ಯಮಟ್ಟದ ಕನಕ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾತನಾಡಿದ ಕಾಗಿನೆಲೆ ಮಠದ ನಿರಂಜನಾಂದಪುರಿ ಸ್ವಾಮೀಜಿ ಅವರನ್ನು ಜೋಡುಕಟ್ಟೆಯಿಂದ ರಥಬೀದಿಗೆ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.

    ನಂತರ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ ಕೃಷ್ಣನ ನಾಡಿನಲ್ಲಿ ಕನಕ ಪೀಠದ ಶಾಖಾ ಮಠ ತೆರೆಯುವುದು ನನ್ನ ಬಹುದಿನಗಳ ಕನಸಾಗಿದ್ದು, ಕನಕನ ಮೂರ್ತಿಗೆ ಸರಿಯಾದ ಗೌರವ ಸಿಗಲಿಲ್ಲ ಎಂಬ ಕೊರಗು ನನಗೆ ಇದೆ ಎಂದು ಹೇಳಿದ ಕಾಗಿನೆಲೆ ಮಠಾಧೀಶರು ಇದನ್ನು ಕೃಷ್ಣ ಮಠದ ಅಷ್ಟ ಮಠಾಧೀಶರು ಸರಿಪಡಿಸಬೇಕು ಎಂದು ಹೇಳಿದರು.

    ಪೇಜಾವರ ಶ್ರೀ ಗಳು ಮಠಕ್ಕೆ ಆಗಮಿಸುವಂತೆ ಕೋರಿದ್ದಾರೆ ಎಂದು ಹೇಳಿದ ನಿರಂಜನಾಂದಪುರಿ ಸ್ವಾಮೀಜಿ ಕನಕ ಜಯಂತಿ ಸಭೆಯ ಬಳಿಕ ಪೇಜಾವರ ಶ್ರೀಗಳನ್ನು ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು. ನಮ್ಮ ಕಾಗಿನೆಲೆ ಮಠದ ೨೫ ನೇ ವರ್ಷದ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳಿಗೆ ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು.

    ಕೆಲವು ಆಚಾರ ವಿಚಾರಗಳಲ್ಲಿ ನಮ್ಮ ಮಧ್ಯೆ ವ್ಯತ್ಯಾಸಗಳಿರಬಹುದು. ಆದರೆ ಪೇಜಾವರ ಶ್ರೀಗಳಿಗೆ ನಮ್ಮ ಮೇಲೆ ಬಹಳ ಪ್ರೀತಿ ಇದೆ ಎಂದು ಹೇಳಿದರು. ಕೆಲವು ಬುದ್ಧಿ ಜೀವಿಗಳು ಪ್ರಚಾರಕ್ಕಾಗಿ ಕನಕನ ಭಕ್ತಿಗೆ ಕೃಷ್ಣ ತಿರುಗಿ ನಿಂತಿಲ್ಲ ಎಂದು ಹೇಳುತ್ತಾರೆ. ಇದು ಅವರ ಅಭಿಪ್ರಾಯ . ಆದರೆ ಕನಕನ ಕಿಂಡಿ ಕನಕನ ಪವಾಡ ಇದೆಲ್ಲಾ ಇತಿಹಾಸ ಯಾರೂ ಇದನ್ನು ಬದಲಿಸಲಾಗುವುದಿಲ್ಲ. ಇದು ನಿತ್ಯಸತ್ಯ ಉಡುಪಿಯಲ್ಲಿ ಕಾಗಿನೆಲೆ ಶ್ರೀ ಹೇಳಿಕೆ.

    ಉಡುಪಿ ಹಾಲು ಮತ ಸಭಾದ ವತಿಯಿಂದ ರಾಜ್ಯಮಟ್ಟದ ಕನಕ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಕಾಗಿನೆಲೆ ಸ್ವಾಮೀಜಿ, ಸಚಿವ ಪ್ರಮೋದ್ ಮಧ್ವರಾಜ್ ಬಂಡೆಪ್ಪ ಕಾಶಪ್ಪನವರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *