LATEST NEWS
ಕರ್ನಾಟಕ ಸಿಎಂ ಬೀಫ್ ತಿಂದು ಉಡಾಫೆ ಮಾತುಗಳನ್ನಾಡುತ್ತಾರೆ – ಸುರೇಂದ್ರಕುಮಾರ್ ಜೈನ್

ಕರ್ನಾಟಕ ಸಿಎಂ ಬೀಫ್ ತಿಂದು ಉಡಾಫೆ ಮಾತುಗಳನ್ನಾಡುತ್ತಾರೆ – ಸುರೇಂದ್ರಕುಮಾರ್ ಜೈನ್
ಉಡುಪಿ ನವೆಂಬರ್ 26: ಉಡುಪಿಯ ಧರ್ಮಸಂಸದ್ 3ನೇ ದಿನವಾದ ಇಂದು ಗೋಹತ್ಯೆ ಗೋಷ್ಠಿ ನಡೆಯಿತು. ಗೋ ಹತ್ಯೆ ಗೋಷ್ಠಿಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಸುರೇಂದ್ರಕುಮಾರ್ ಜೈನ್ ಗೋವು ರಕ್ಷಣೆ ಎಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂದರು. ದೇಶದ ಐಪಿಸಿ ಸೆಕ್ಷನ್ ನಲ್ಲಿ ಗೋರಕ್ಷಣೆ ಪರ ಕಾನೂನು ಇದೆ ಆದರೂ ಕರ್ನಾಟಕದ ಸಿಎಂ ಬೀಫ್ ತಿನ್ನುತ್ತಾರೆ ಮತ್ತು ಗೋರಕ್ಷಣೆ ಬಗ್ಗೆ ಉಡಾಫೆ ಮಾತುಗಳನ್ನು ಆಡುತ್ತಾರೆ ಎಂದರು.
ಗೋರಕ್ಷಣೆ ಮಹಾತ್ಮಾ ಗಾಂಧಿ ಕಾಲದಿಂದಲೂ ನಡೆಯುತ್ತಿದೆ ಎಂದು ಹೇಳಿದ ಅವರು ಈಗಿನ ಕೇಂದ್ರ ಸರ್ಕಾರಕ್ಕೆ ಈ ಆರೋಪ ಕಟ್ಟಬೇಡಿ ಎಂದರು. ಭಾರತದಿಂದ ಮಾಂಸ ರಫ್ತಾಗುವಾಗ ಡಿಎನ್ ಎ ಪರೀಕ್ಷೆ ಮಾಡಿಸಬೇಕು ಎಂದರು.

ಅಲ್ಪಸಂಖ್ಯಾತ – ಬಹುಸಂಖ್ಯಾತ ಅನುದಾನ ಬಗ್ಗೆ ದೇಶದಾದ್ಯಂತ ಗೊಂದಲವಿದೆ ಪೇಜಾವರಶ್ರೀ ಈ ಬಗ್ಗೆ ಮಾತನಾಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಬಗ್ಗೆ ಸಂವಿಧಾನದ ಪರಿಶೀಲನೆ ನಡೆಯಬೇಕು ಎಂದು ಹೇಳಿದರು. ದೇಶದಲ್ಲಿ ಗೋಹತ್ಯೆ ಸಮಾಪ್ತಿ ಮಾಡುವುದು ಅಗತ್ಯದ ಕೆಲಸವಾಗಿದ್ದು, ಇದು ಕೇವಲ ವಿಹಿಂಪ ಗೆ ಮಾತ್ರವಲ್ಲ ದೇಶಕ್ಕೆ ಇದರ ಅಗತ್ಯವಿದೆ ಎಂದರು.