DAKSHINA KANNADA
ಕದ್ರಿ ಪಾರ್ಕಿನಲ್ಲಿ ಮತ್ತೆ ಸದ್ದು ಮಾಡಲಿರುವ ‘ ಬಾಲ ಮಂಗಳ ಎಕ್ಸ್ ಪ್ರೆಸ್ ‘
ಮಂಗಳೂರು, ಆಗಸ್ಟ್ 19: ಮಂಗಳೂರಿನ ಏಕೈಕ ಸಾರ್ವಜನಿಕ ಉದ್ಯಾನವನ ವಾಗಿರುವ ಕದ್ರಿ ಪಾರ್ಕ್‌ನಲ್ಲಿ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಬಾಲ ಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಮತ್ತೆ ಓಡಾಡುವ ದಿನಗಳು ಸನ್ನಿಹಿತ ವಾಗಿವೆ. ಮಂಗಳೂರು ದಕ್ಷಿಣ ಶಾಸಕರಾದ ಜೆ.ಆರ್.ಲೋಬೊರವರು ಪುಟಾಣಿ ರೈಲು ಕಾಮಗಾರಿಗೆ ಭೂಮಿ ಪೂಜೆ ನೆರವೆರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕದ್ರಿ ಪಾರ್ಕ್ ನ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಹಲವಾರು ಯೋಜನೆಗಳನ್ನು ಹಾಕಿಕೊoಡಿದ್ದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇನ್ನಷ್ಟು ಪ್ರಗತಿ ಕಾಮಗಾರಿಯನ್ನು ಹಮ್ಮಿಕೊoಡು ಇದನ್ನು ಒoದು ಪ್ರವಾಸಿ ಕೇಂದ್ರವಾಗಿ ಮಾಡಲಾಗುವುದು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿoದ 80ಲಕ್ಷ ಅನುದಾನವನ್ನು ಒದಗಿಸಿದೆ. ಪ್ರಸ್ತುತ ಇರುವ ಇಲ್ಲಿನ ರೈಲು ಸಂಫೂರ್ಣ ಹಾಳಾಗಿ ತುಕ್ಕು ಹಿಡಿದಿದ್ದು ಗುಜರಿ ಸೇರುವ ಸಾಲಿನಲ್ಲಿದೆ. ಕಳೆದ ಹೆಚ್ಚು ಕಡಿಮೆ 5 ವರ್ಷಗಳಿಂದ ಇದು ಸ್ಥಗಿತಗೊಂಡಿದ್ದು, ಜನಪ್ರತನಿಧಿ ಹಾಗೂ ಅಧಿಕಾರಿಗಳ ನಿರಾಸಕ್ತಿ ಇಲ್ಲಿ ಎದ್ದು ಕಾಣುತ್ತಿತ್ತು. ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಂಚರಿಸುತ್ತಿದ್ದ ಹಳೇ ರೈಲನ್ನೇ ಕದ್ರಿ ಪಾರ್ಕ್‌ಗೆ ತರಲಾಗಿತ್ತು. ಕೇವಲ ಎರಡು ಬೋಗಿಗಳು ಇರುವ ಈ ರೈಲು 1975ರಲ್ಲಿ ನಿರ್ಮಾಣಗೊಂಡಿದ್ದು, ಈಗ ಮಹಾ ನಗರವಾಗಿ ರೂಪುಗೊಂಡಿರುವ ಮಂಗಳೂರು ನಗರದ ಜನ ಸಂಖ್ಯೆಯೂ ಏರಿಕೆಯಾಗಿದ್ದು, ನೂತನ ರೈಲಿಗೆ ಮೂರು ಬೋಗಿಗಳ ಜೋಡನೆ ಆಗಬೇಕಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ, ಬಹುಷ ಮುಂದಿನ ಬೇಸಿಗೆ ರಜೆಗೆ ಮಕ್ಕಳಿಗೆ ಆಡಲು ಈ ರೈಲು ಸಿಗಬಹುದು.