LATEST NEWS
ಇಳಿಕೆ ಹಾದಿಯತ್ತ ಚಿನ್ನದ ಬೆಲೆ

ಇಳಿಕೆ ಹಾದಿಯತ್ತ ಚಿನ್ನದ ಬೆಲೆ
ಮುಂಬೈ ಡಿಸೆಂಬರ್ 13: ಒಂದೇ ವಾರದಲ್ಲಿ ಚಿನ್ನದ ಬೆಲೆ ಸುಮಾರು ಒಂದು ಸಾವಿರ ರೂಪಾಯಿ ಇಳಿದಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಕಳೆದ ವಾರದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1ಸಾವಿರ ರೂಪಾಯಿ ಇಳಿಕೆಯಾಗಿದ್ದು 29,400 ರೂಪಾಯಿಗೆ ಕುಸಿದಿದೆ. 4 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಚಿನ್ನದ ಧಾರಣೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಯಾಗಿದ್ದು, ಸ್ಥಳೀಯವಾಗಿ ಕೂಡ ಚಿನ್ನಾಭರಣದ ಮೇಲಿನ ಬೇಡಿಕೆ ಕುಸಿತವಾಗಿದೆ. ಈ ಹಿನ್ನಲೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಆಭರಣಕ್ಕೆ ತಯಾರಿಸುವ ಚಿನ್ನದ ಬೆಲೆ 22 ಕ್ಯಾರೆಟ್ ನ ಚಿನ್ನದ ಬೆಲೆ ಒಂದು ಗ್ರಾಂ ಇಂದಿನ ಬೆಲೆ 2655 ರೂಪಾಯಿ ಆಗಿದೆ.
