LATEST NEWS
ಆಹಾರ ಹುಡುಕಿ ನಾಡಿಗೆ ಬಂದ ಅತಿಥಿ- 15ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಕಾರವಾರ ಅಗಸ್ಟ್ 21: ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೆರವಡಿ ಗ್ರಾಮ ವ್ಯಾಪ್ತಿಯ ಕಡಿಯೆ ಯ ರೈತ ಕೃಷ್ಣ ಗುನಗಿ ಎಂಬುವರ ಮನೆಯ ಹಿತ್ತಲಲ್ಲಿ ಕಾಣಿಸಿಕೊಂಡ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸಂಜೆ ಹಿಡಿದು ಅಣಶಿ ಅರಣ್ಯಕ್ಕೆ ಬಿಟ್ಟರು.
ಮನೆ ಹಿಂಭಾಗ ಕಟ್ಟಿಗೆ ಇಟ್ಟಿದ್ದ ಕೊಠಡಿಯೊಳಗೆ ಕಾಳಿಂಗ ಸರ್ಪ ಹೋಗುವುದನ್ನು ನೋಡಿದ ಕೃಷ್ಣ ಅವರ ಪತ್ನಿ ತಕ್ಷಣವೇ ಆ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು.

ಉರಗ ಪ್ರೇಮಿಯ ಆದ ಗೋಪಶಿಟ್ಟಾ ವಲಯದ ಅರಣ್ಯ ರಕ್ಷಕ ರಮೇಶ ಬಡಿಗೇರ ಅವರು ಸಿಬ್ಬಂದಿ ಜತೆ ತೆರಳಿ ಹಾವನ್ನು ಹಿಡಿದು ಬಳಿಕ ಅರಣ್ಯಕ್ಕೆ ಬಿಟ್ಟರು.