BANTWAL
ಚರ್ಮ ವ್ಯಾಪಾರಿ, ಕಿರಾತಕ ಪೋಲೀಸ್ ಬಲೆಗೆ..
ಪುತ್ತೂರು,ಅಗಸ್ಚ್ 18: ಮಧ್ಯಮ ವರ್ಗದ ಬಡ ಹೆಣ್ಣು ಮಕ್ಕಳನ್ನು ಪುಸಲಾಯಿಸಿ , ಹಣದ ಅಮಿಷ ತೋರಿಸಿ ಅತ್ಯಾಚಾರವೆಸಗಿ ಬಳಿಕ ಅದರ ಚಿತ್ರೀಕರಣವನ್ನು ಮಾಡಿ ಹುಡುಗಿಯರನ್ನು ಮತ್ತೆ ತನ್ನ ಸ್ನೇಹಿತರೊಂದಿಗೂ ಹಂಚಿಕೊಳ್ಳುತ್ತಿದ್ದ ಖದೀಮನೊಬ್ಬನನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ವಶಕ್ಕೆ ಪಡೆದು ಬಳಿಕ ಆತನನ್ನು ಪುತ್ತೂರು ನಗರ ಪೋಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಬಂಟ್ವಾಳದ ನಿರ್ಜನ ಪ್ರದೇಶದಲ್ಲಿ ಹುಡುಗಿಯ ಜೊತೆಗೆ ಮಜಾ ಉಡಾಯಿಸುತ್ತಿದ್ದ ಈತನನ್ನು ಬಂಟ್ವಾಳ ಪೋಲೀಸರು ವಶಕ್ಕೆ ಪಡೆದ ಬಳಿಕ ಹೆಚ್ಚಿನ ತನಿಖೆಗಾಗಿ ಪುತ್ತೂರು ನಗರ ಪೋಲೀಸ್ ಠಾಣೆಗೆ ನೀಡಿದ್ದರು. ಆದರೆ ನಗರ ಪೋಲೀಸರು ಹುಡುಗಿಯು ಈತನ ಮೇಲೆ ದೂರು ನೀಡಲಿಲ್ಲ ಎನ್ನುವ ಕಾರಣ ನೀಡಿ ಯಾವುದೋ ಸಣ್ಣಪುಟ್ಟ ಕೇಸು ಜಡಿದು ತನ್ನ ಕೈ ತೊಳೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ನವೀನ್ ಆಚಾರ್ಯ ಎನ್ನುವ ಈತ ಪುತ್ತೂರಿನಲ್ಲಿ ಚಿನ್ನದ ಕೆಲಸ ನಿರ್ವಹಿಸುತ್ತಿದ್ದು, ತನ್ನ ಹೆಣ್ಣು ಬಾಕತನಕ್ಕಾಗಿಯೇ ಜೂನಿಯರ್ ಕಾಲೇಜಿನ ಪಕ್ಕದಲ್ಲೇ ಒಂದು ಬಾಡಿಗೆ ಮನೆಯನ್ನೂ ಮಾಡಿಕೊಂಡಿದ್ದಾನೆ. ಜೂನಿಯರ್ ಕಾಲೇಜಿಗೆ ಬರುವ ಬಡ ಹೆಣ್ಣುಮಕ್ಕಳನ್ನು ತನ್ನ ಕಾರು ಹಾಗೂ ಬೈಕನ್ನು ತೋರಿಸಿಕೊಂಡು ಬಲೆಗೆ ಹಾಕುತ್ತಿದ್ದಾನೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಕೇವಲ ತಾನಲ್ಲದೆ, ಬಡ ಹೆಣ್ಣುಮಕ್ಕಳನ್ನು ತನ್ನ ಗೆಳೆಯರೊಂದಿಗೂ ಹಂಚಿಕೊಳ್ಳುತ್ತಿರುವ ಈತ ಪೋಲೀಸರೊಂದಿಗೂ, ಜನಪ್ರತಿನಿಧಿಗಳೊಂದಿಗೂ ಅಕ್ರಮ ಸಂಬಂಧವನ್ನೂ ಹೊಂದಿದ್ದಾನೆ. ಇದೇ ಕಾರಣಕ್ಕಾಗಿ ಈತನ ಮೇಲೆ ಹಲವು ದೂರುಗಳು ಬಂದರೂ, ಪೋಲೀಸರು ಇವನನ್ನು ವಿಚಾರಿಸುವ ಗೋಜಿಗೂ ಹೋಗಿಲ್ಲ. ಅಲ್ಲದೆ ಈತ ಸಂಘಟನೆಯೊಂದರ ಹೆಸರು ಹೇಳಿಯೂ ಕೆಲವರನ್ನು ಹೆದರಿಸುತ್ತಿದ್ದು, ಈತನಿಗೆ ರಾಜ್ಯ ಯುವಮೋರ್ಚಾದ ಪದಾಧಿಕಾರಿಯೊಬ್ಬರ ನಿಕಟ ಸಂಬಂಧವೂ ಇದ್ದು, ಇದೇ ಕಾರಣಕ್ಕಾಗಿ ಈತನ ಗೋಜಿಗೆ ಯಾರೂ ಹೋಗುತ್ತಿಲ್ಲ. ಇದೀಗ ಬಂಟ್ವಾಳದ ದಾಸರಕೋಡಿಯಲ್ಲಿ ಸಂಘಟನೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದ ನವೀನ್ ಆಚಾರ್ಯನಿಗೆ ಕಾರ್ಯಕರ್ತರು ಚೆನ್ನಾಗಿ ತದುಕಿದ ಬಳಿಕ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಪೋಲೀಸರ ಮುಂದೆ ತನ್ನ ಚಾಳಿಯನ್ನು ಸಾದರಪಡಿಸಿದ ಹಿನ್ನಲೆಯಲ್ಲಿ ಬಂಟ್ವಾಳ ಪೋಲೀಸರು ಪುತ್ತೂರು ನಗರ ಪೋಲೀಸರ ವಶಕ್ಕೆ ನವೀನ್ ಆಚಾರ್ಯ ನನ್ನು ನೀಡಿದರೂ ಪುತ್ತೂರು ನಗರ ಪೋಲೀಸರು ಮಾತ್ರ ಈತನ ಮೇಲೆ ಯಾವುದೇ ದೂರಿಲ್ಲ ಎನ್ನುವ ಕಾರಣಕ್ಕೆ ತನಿಖೆಯನ್ನೂ ನಡೆಸಿದೆ ಈತನನ್ನು ಗೌರವಾಧಾರಗಳಿಂದ ಬಿಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
You must be logged in to post a comment Login