LATEST NEWS
ಹಿಂದೂ ಸಂಘಟನೆಗಳಿಂದ ಕಡಬ ಬಂದ್

ಹಿಂದೂ ಸಂಘಟನೆಗಳಿಂದ ಕಡಬ ಬಂದ್
ಪುತ್ತೂರು ಅಕ್ಟೋಬರ್ 28: ಹಿಂದೂ ಯುವಕರ ಮೇಲಿನ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಇಂದು ಕಡಬ ಹಾಗೂ ಸುಬ್ರಮಣ್ಯ ದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್ ಆಚರಿಸುತ್ತಿದೆ.
ಮೆಕ್ಕಾ ಮದೀನಾ ಮಸೀದಿಯ ಚಿತ್ರದಲ್ಲಿ ಹನುಮಂತ ದೇವರ ಚಿತ್ರವನ್ನು ಅಂಟಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕಡಬ ಸ್ಟೇಷನ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕಡಬದ ಪ್ರದೀಪ್ ಎನ್ನುವ ಯುವಕನನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಈತನ ಜೊತೆಗೆ ಈ ಕೃತ್ಯಕ್ಕೆ ಸಂಬಂಧ ಪಡದ ಕೆಲವು ಹಿಂದೂ ಯುವಕರನ್ನೂ ಪೋಲೀಸರು ವಶಕ್ಕೆ ಪಡೆದಿದ್ದರು.

ಅಮಾಯಕ ಹಿಂದೂ ಯುವಕರನ್ನು ಪ್ರಕರಣದಲ್ಲಿ ಸಿಲುಕಿಸಿದ ಪೋಲೀಸ್ ವಿರುದ್ಧ ಹಿಂದೂ ಸಂಘಟನೆಗಳು ಈ ಬಂದ್ ಗೆ ಕರೆ ನೀಡಿದೆ.