ಸಿಡಿಲು ಬಡಿದು ಯುವಕ ಸಾವು ಪ್ರಕರಣ :ಮೃತನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ

ಪುತ್ತೂರು, ಫೆಬ್ರವರಿ 07 : ಸುಳ್ಯದಲ್ಲಿ  ಸಿಡಿಲು ಬಡಿದು ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಪ್ರವೀಣ್ (21 )ನ ಸಂಬಂಧಿಕರಿಂದ ದೂರು ಪಡೆಯಲು ಪೋಲೀಸರ ನಿರಾಸಕ್ತಿ ವಹಿಸಿದ ವಿದ್ಯಮಾನ ಕೂಡ ನಡೆದಿದೆ. ಕಡಬದ ಸರಕಾರಿ ಆಸ್ಪತ್ರೆಯಲ್ಲಿರುವ ಮೃತ ಶರೀರವನ್ನೂ ಕೂಡ ಪೊಲಿಸರು ಬಿಟ್ಟುಕೊಡಲು  ನಿರಾಸಕ್ತಿ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಕೋಣೆ ಬಾಗಿಲು ಮುಚ್ಚಿ ಪ್ರವೀಣ್ ಕುಟುಂಬಸ್ಥರಿಂದ ಹೇಳಿಕೆ ಪಡೆಯುತ್ತಿದ್ದಾರೆ ಎಂದು ದೂರಿದ್ದಾರೆ.

ಇನ್ನು ಪ್ರವೀಣ್ ಸಿಡಿಲು ಬಡಿದು ಸಾವಿಗೀಡಾಗಿ  5 ಗಂಟೆ ಕಳೆದರೂ ಸ್ಥಳ ಪರಿಶೀಲನೆ ನಡೆಸದ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಪೋಲೀಸರ ಕ್ರಮದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಡಿಲು ಬಡಿದು ಸಾವೇ ಅಥವಾ ಇನ್ನೇನಾದರೂ ಸಂಭವಿಸಿದೆಯೇ ಎನ್ನುವ ಅನುಮಾನದಲ್ಲಿ ಪೊಲೀಸರಿದ್ದು ಮೃತರ ಪರಿವಾರಕ್ಕೆ ಶವ ಹಸ್ತಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

1 Shares

Facebook Comments

comments