ಉಡುಪಿ ಡಬ್ಬಲ್ ಮರ್ಡರ್ ಇಬ್ಬರು ಆರೋಪಿಗಳ ಬಂಧನ

ಉಡುಪಿ, ಫೆಬ್ರವರಿ 07 ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿದ್ದಾರೆ.  ಖಚಿತ ಮಾಹಿತಿ ಆಧಾರಿಸಿ ಮಡಿಕೇರಿಯಲ್ಲಿ ಅವಿತುಕೊಂಡಿದ್ದ ಇಬ್ಬರು ಆರೋಪಿಗಳಾದ ರಾಜಶೇಖರ ರೆಡ್ಡಿ ಮತ್ತು ರವಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 27 ರಂದು ಕೋಟದಲ್ಲಿ  ಭರತ್ ಮತ್ತು ಯತೀಶ್ ಎಂಬ ಇಬ್ಬರ ಕೊಲೆಯಾಗಿತ್ತು. ರೌಡಿ ಶೀಟರ್ ಹರೀಶ್ ರೆಡ್ಡಿ ಸಹಚರ ರ ಕೃತ್ಯ ನಡೆದಿದೆ ಎಂದು ತಿಳಿದ ಪೊಲಿಸರು ತನಿಖೆಯನ್ನು ಚುರುಕುಗೊಳಿಸಿ ಪ್ರಮುಖ ಆರೋಪಿ ಹರೀಶ್ ರೆಡ್ಡಿ ಸಹೋದರ ರಾಜಶೇಖರ್ ರೆಡ್ಡಿ ಮತ್ತು ಆತನ ಸಹಚರ ರವಿ ತಲ್ಲೂರನನ್ನು ಪೊಲಿಸರು ಬಂಧಿಸಿದ್ದಾರೆ.

ಉಳಿದಂತೆ ಇನ್ನೂ ಆರು ಆರೋಪಿಗಳ ಬಂಧನ ಬಾಕಿ ಇದ್ದು ಶೀಘ್ರವೇ ಬಂಧಿಸುವ ಭರವಸೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಟಾಯ್ಲೆಟ್ ಪಿಟ್ ವಿಚಾರದಲ್ಲಿ ಕೊಲೆ ನಡೆದಿತ್ತು ಎಂದು ಅಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದರಿಂದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಕೊಲೆಗೆ ಅನ್ಯ ಕಾರಣ ಇದೆ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಉಳಿದಂತೆ ಪ್ರಮುಖ ಆರೋಪಿ ಹರೀಶ್ ರೆಡ್ಡಿ ಬಂಧನ ಬಾಕಿ ಇದೆ. ಶೀಘ್ರವೇ ಬಂಧಿಸುವ ಭರವಸೆಯನ್ನು ಪೊಲಿಸರು ವ್ಯಕ್ತಪಡಿಸಿದ್ದಾರೆ.

2 Shares

Facebook Comments

comments