LATEST NEWS
ಪರೇಶ್ ಮೇಸ್ತ ಹೆಣದ ಮೇಲೆ ಸಿಎಂ ಶಿಲಾನ್ಯಾಸ – ಶೋಭಾ ಕರಂದ್ಲಾಜೆ
ಪರೇಶ್ ಮೇಸ್ತ ಹೆಣದ ಮೇಲೆ ಸಿಎಂ ಶಿಲಾನ್ಯಾಸ – ಶೋಭಾ ಕರಂದ್ಲಾಜೆ
ಉಡುಪಿ ಡಿಸೆಂಬರ್ 8 : ಹೊನ್ನಾವರದ ಪರೇಶ್ ಮೇಸ್ತ ನನ್ನು ಜಿಹಾದಿಗಳು ಕೊಂದಿದ್ದು, ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲೆ ತಿಳಿದಿತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಪರೇಶ್ ಮೇಸ್ತ ಒಬ್ಬ ಹಿಂದೂ ಕಾರ್ಯಕರ್ತನಾಗಿದ್ದು ಜಿಹಾದಿಗಳು ಆತನನ್ನು ಕೊಂದಿದ್ದಾರೆ ಎಂದು ಆರೋಪಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಕಾರ್ಯಕ್ರಮ ಇದೆ ಎಂಬ ಕಾರಣಕ್ಕೆ ಪರೇಶ್ ಮೆಸ್ತ ಕೊಲೆಯನ್ನು ಪೊಲೀಸರು ಮುಚ್ಚಿಟ್ಟಿದ್ದರು ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ 52 ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದರು.
ಒಬ್ಬ ಹಿಂದೂ ಕೊಲೆಯಾದಾಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಇದ್ದರೂ ಭೇಟಿ ನೀಡಲಿಲ್ಲ. ಮುಖ್ಯಮಂತ್ರಿಗಳು ಉತ್ತರ ಕನ್ನಡ ಭೇಟಿಗೆ ಮೊದಲೇ ಹೊನ್ನಾವರದಲ್ಲಿ ಗಲಭೆಗಳಾಗಿತ್ತು ಆದರೂ ಈ ಬಗ್ಗೆ ಮುಖ್ಯಮಂತ್ರಿಗಳು ತುಟಿ ಬಿಚ್ಚಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿಗಳಿಗೆ ಪರೇಶ್ ಮೆಸ್ತ ಸತ್ತಿದ್ದು ಗೊತ್ತಿರಲಿಲ್ವಾ ಎಂದು ಪ್ರಶ್ನೆ ಮಾಡಿದ ಸಂಸದೆ ಗೊತ್ತಿಲ್ಲಾ ಎಂದರೆ ನಿಮ್ಮ ಗೂಡಾಚಾರ ಇಲಾಖೆ ಎನು ಮಾಡ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಪರೇಶ್ ಮೆಸ್ತ ಸಾವಿನ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿತ್ತು ಆದರೂ ವಿಷಯ ಮುಚ್ಚಿಟ್ಟು ಪರೇಶ್ ಮೇಸ್ತ ಹೆಣದ ಮೇಲೆ ಸಿಎಂ ಶಿಲಾನ್ಯಾಸ ಮಾಡಿ ಹೋಗಿದ್ದಾರೆ ಎಂದು ಆರೋಪಿಸಿದರು.
ಜಿಹಾದಿಗಳು ಬಿಜೆಪಿ ಕಾರ್ಯಕರ್ತರಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದಾರೆ. ಚಂದಾವರ ದೇವಸ್ಥಾನಕ್ಕೆ ಚಪ್ಪಲಿ ತೂರಾಟ ಮಾಡಿದ್ರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಮಾತನಾಡಲಿಲ್ಲ ಇದು ಮುಖ್ಯಮಂತ್ರಿಯವರ ಹಿಂದೂ ವಿರೋಧಿ ನೀತಿ ತೋರಿಸುತ್ತದೆ ಎಂದು ಆರೋಪಿಸಿದರು.
You must be logged in to post a comment Login