Connect with us

LATEST NEWS

ಸಾರ್ವಜನಿಕ ಗಣೇಶೋತ್ಸವ ಆಚರಣೆ: ಪೊಲೀಸ್‌ ಆಯುಕ್ತರ ಸೂಚನೆ

ಮಂಗಳೂರು,ಆಗಸ್ಟ್ 24: ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಮಂಗಳೂರು ಪೊಲೀಸ್‌ ಆಯುಕ್ತರುಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂದರ್ಭದಲ್ಲಿ ಹಾಗೂ ಗಣೇಶ ವಿಗ್ರಹ ವಿಸರ್ಜನ ಮೆರವಣಿಗೆ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

 ಗಣೇಶ ಮಂಟಪ ಸಂಘಟಕರು  ಅನುಸರಿಸಬೇಕಾದ ಕ್ರಮಗಳು
1.ಗಣೇಶ ವಿಗ್ರಹ ಸ್ಥಾಪಿಸಿದ ಸ್ಥಳದಲ್ಲಿ ಬೆಂಕಿ ದುರಂತ ನಿವಾರಿಸಲು ವ್ಯವಸ್ಥೆ ಕ್ರಮಕೈಗೊಳ್ಳಬೇಕು.
2. ಜಾಗದ ಮಾಲಕರ ಅನುಮತಿ ಹಾಗೂ ವಿದ್ಯುತ್‌ ಸಂಪರ್ಕ ಕುರಿತಂತೆ ಸೂಕ್ತ ಪರವಾನಿಗೆ ಪಡೆಯಬೇಕು.
3. ರಾತ್ರಿ 10 ಗಂಟೆ ವೇಳೆಗೆ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು.
4. ಆಸ್ಪತ್ರೆ ಮತ್ತು ಶಾಲಾ ಆವರಣಗಳಲ್ಲಿ ಆರೋಗ್ಯ ಸಂಬಂಧಿತ ಮಾಲಿನ್ಯ ಸಮಸ್ಯೆ ನಿವಾರಿಸಲು ಧ್ವನಿ ಮತ್ತು ಪಟಾಕಿಗಳನ್ನು ಆದಷ್ಟು ಕಡಿಮೆ ಮಾಡಬೇಕು.
5. ಗಣೇಶನ ವಿಗ್ರಹಗಳ ವಿಸರ್ಜನಾ ಸ್ಥಳದಲ್ಲಿ ಸೂಕ್ತ ಬೆಳಕು, ಬ್ಯಾರಿಕೇಡ್‌ ಮತ್ತು ಈಜು ತಜ್ಞರ ನೇಮಕ ಮಾಡಬೇಕು. ಜತೆಗೆ ಈ ಕುರಿತು ಕೈಗೊಂಡ ಸಿದ್ಧತೆ ಗಳ ಬಗ್ಗೆ ಮಹಾನಗರ ಪಾಲಿಕೆಗೆ ಮಾಹಿತಿ ಕೊಡಬೇಕು.
6. ಗಣಪತಿ ವಿಸರ್ಜನಾ ಮೆರವಣಿಗೆ ಮತ್ತು ಸ್ಥಬ್ದ ಚಿತ್ರಗಳನ್ನು ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗದಂತೆ ಕೊಂಡುಹೋಗಬೇಕು ಹಾಗೂ ಆದಷ್ಟು ಶೀಘ್ರದಲ್ಲಿ ತಲಪುವಂತೆ ವ್ಯವಸ್ಥೆ ಮಾಡಬೇಕು.
7. ರಾತ್ರಿ ವೇಳೆ ತುರ್ತು ನೆರವಿನ ಆವಶ್ಯಕತೆ ಬಿದ್ದರೆ ಅದನ್ನು ಒದಗಿಸಲು ಸಂಘಟಕರು ಸ್ವಯಂ ಸೇವಾ ಕಾರ್ಯಕರ್ತರನ್ನು ನೇಮಿಸಬೇಕು. ಮೆಸ್ಕಾಂ, ಆರೋಗ್ಯ ಇಲಾಖೆ, ಅಗ್ನಿ ಶಾಮಕ ಸೇವೆ ಮತ್ತು ಮಹಾನಗರ ಪಾಲಿಕೆಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಕಳುಹಿಸಬೇಕು.

 

Share Information
Advertisement
Click to comment

You must be logged in to post a comment Login

Leave a Reply