Connect with us

    LATEST NEWS

    ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್, ಬಿಎಸ್‏ವೈ ಟ್ವೀಟ್ : ರಾಜಕೀಯ ವಲಯದಲ್ಲಿ ಸಂಚಲನ

    ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್, ಬಿಎಸ್‏ವೈ ಟ್ವೀಟ್ : ರಾಜಕೀಯ ವಲಯದಲ್ಲಿ ಸಂಚಲನ

    ಬೆಂಗಳೂರು, ಮಾರ್ಚ್ 16 : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಕಾಲಘಟ್ಟದಲ್ಲಿ ಮಾಜಿ ಮುಖ್ಯಮಂತ್ರಿ

    ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ಎಸ್ ವೈ ಅವರು ಇಂದು ಸಂಜೆ 5 ಗಂಟೆಯೊಳಗೆ ಬ್ರೇಕಿಂಗ್ ನ್ಯೂಸ್ ನೀಡುವ ಸುಳಿವು ನೀಡಿದ್ದಾರೆ.

    ಯಡಿಯೂರಪ್ಪನವರು ಸ್ವತ ಈ ಬಗ್ಗೆ ಟ್ವೀಟ್ ಮಾಡಿದ್ದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

    ಯಡಿಯೂರಪ್ಪನವರು ಇಂದು ಸಂಜೆಯೊಳಗೆ ಯಾರ ಬಗ್ಗೆ, ಏನು ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎಂಬ ಕುತೂಹಲ ರಾಜಕೀಯ ವಲಯ ಹಾಗೂ ಮಾದ್ಯಮ ಮತ್ತು ಜನತೆಯಲ್ಲಿ ಕಾಡಲಾರಂಭಿಸಿದೆ.


    ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ನಿಂದನೆಯ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಕಾಂಗ್ರೆಸ್ ಮುಖಂಡರಿಗೆ ನೊಟೀಸ್ ಜಾರಿ ಮಾಡಿತ್ತು.

    ಸಿದ್ದರಾಮಯ್ಯನವರು ಬಹುತೇಕ ಭಾಷಣಗಳಲ್ಲಿ ತಮ್ಮನ್ನು ಜೈಲಿಗೆ ಹೋಗಿ ಬಂದವರು,

    ಚೆಕ್ ಮೂಲಕ ಲಂಚ ಪಡೆದವರು ಎಂದು ಹೀಯಾಳಿಸುತ್ತಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇನ್ನಿತರ ಕೆಲವು ಕಾಂಗ್ರೆಸ್ ಮುಖಂಡರು ತಾವು ಸಾರ್ವಜನಿಕವಾಗಿ ಈಗಾಗಲೇ ಖುಲಾಸೆಗೊಂಡಿರುವ ಪ್ರಕರಣ ಸೇರಿದಂತೆ ತಮ್ಮನ್ನು ಅಪರಾಧಿ ಎಂಬಂತೆ ಮಾತನಾಡುತ್ತಿದ್ದು ಮಾನಹಾನಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply