LATEST NEWS
ಶೋಭಾ ಕರಂದ್ಲಾಜೆ ಮಡಿಕೇರಿ ಆಸ್ತಿ ಮಾರಿ ಮಕ್ಕಳಿಗೆ ಅನ್ನ ನೀಡಲಿ – ರಮಾನಾಥ ರೈ

ಮಂಗಳೂರು, ಆಗಸ್ಟ್ 17 : ಮಕ್ಕಳ ಅನ್ನದ ಹೆಸರಿನಲ್ಲಿ ಶೋಭಾ ನಾಟಕ, ಕಾಳಜಿಯಿದ್ದರೆ ಮಡಿಕೇರಿಯ ಆಸ್ತಿ ಮಾರಿ ಊಟ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂಸದೆ ಶೋಭಾ ಕರಂದ್ಲಾಜೆಗೆ ಸಲಹೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕಾನೂನಿನ ಪ್ರಕಾರ ಕಲ್ಲಡ್ಕ ಶಾಲೆ ಹಾಗೂ ಪುಣಚ ಶಾಲೆಯ ಅನುದಾನವನ್ನು ರದ್ದುಗೊಳಿಸಿದ್ದು, ಇದರಲ್ಲಿ ಯಾವುದೇ ದ್ವೇಷದ ರಾಜಕೀಯವಿಲ್ಲ ಎಂದರು.
ಬಿಜೆಪಿ ಈ ವಿಚಾರದಲ್ಲಿ ಸಮಾಜದ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದು, ಇದೀಗ ಭಿಕ್ಷಾಟನೆ ಮೂಲಕ ಅಕ್ಕಿ ಎತ್ತುವ ನಾಟಕ ಮಾಡುತ್ತಿದೆ ಎಂದು ಆರೋಪಿಸಿದ ಅವರು ಇದೀಗ ಶೋಭಾ ಕರಂದ್ಲಾಜೆ ಅಕ್ಕಿಯ ಭಿಕ್ಷಾಟನೆಗೆ ಹೊರಡಿದ್ದು, ಅವರಿಗೆ ಭಿಕ್ಷೆ ಎತ್ತ ಬೇಕಾದ ಪರಿಸ್ಥಿತಿ ಸದ್ಯಕ್ಕಿಲ್ಲ ಎಂದ ಅವರು ಮಡಿಕೇರಿಯಲ್ಲಿರುವ ಆಸ್ತಿಯ ಕೇವಲ ಒಂದಂಶವನ್ನು ಮಾರಾಟ ಮಾಡಿದರೂ ಎಲ್ಲಾ ಮಕ್ಕಳಿಗೆ ಅನ್ನ ನೀಡಬಹುದು ವ್ಯಂಗ್ಯಭರಿತ ಮಾತುಗಳ ಸಲಹೆ ನೀಡಿದ್ದಾರೆ.
ರಾಜಕೀಯ ಸೇರುವ ಮೊದಲು ಗತಿಗೋತ್ರವಿಲ್ಲದ ಅನಾಥ ಶೋಭಾ ಕರಂದ್ಲಾಜೆ ಬಳಿ ಇದೀಗ ಎಷ್ಟು ಆಸ್ತಿಯಿದೆ ಎಂದು ಏಕವಚನದಲ್ಲಿ ಶೋಭಾ ಕರಂದ್ಲಾಜೆಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ಗೃಹಖಾತೆ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಡಿಯೋ
