Connect with us

MANGALORE

ಶಾಂಭವಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಶಾಂಭವಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು, ಸೆಪ್ಟೆಂಬರ್ 05: ಅಪರಿಚಿತ ವ್ಯಕ್ತಿ ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ಹಳೆಯಂಗಡಿ ಸಮೀಪದ ಕದಿಕೆ ಎಂಬಲ್ಲಿ ನಡೆದಿದೆ.

ಹಳೆಯಂಗಡಿ ಯಿಂದ ಕದಿಕೆ ಮೂಲಕ ಸಸಿಹಿತ್ಲುಗೆ ಸಂಪರ್ಕಿಸುವ ನೂತನ ಸೇತುವೆಯಿಂದ ಯುವಕನೋರ್ವ ಏಕಾಏಕಿ ನದಿಗೆ ಹಾರಿದ್ದಾನೆ, ಯುವತಿಯೋರ್ವಳು ಸೇತುವೆಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಯುವಕ ಶಾಂಭವಿ ನದಿಗೆ ಹಾರಿದ್ದನ್ನು ನೋಡಿದ್ದಾಳೆ.

ಈ ಹಿನ್ನೆಲೆಯಲ್ಲಿ ಗಾಬರಿಯಿಂದ ಯುವತಿ ಕಿರುಚಿದ್ದ ಪರಿಣಾಮ ಕೂಡಲೇ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ. ಯುವತಿಯಿಂದ ಮಾಹಿತಿ ಪಡೆದ ಸ್ಥಳಿಯರು ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೂಲ್ಕಿ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ದೋಣಿ ಮೂಲಕ ಹುಡುಕಾಟ ನಡೆಸಿದ್ದು ನೀರಿಗೆ ಹಾರಿದ ಯುವಕ ಪತ್ತೆಯಾಗಿಲ್ಲ. ಶೋಧಕಾರ್ಯ ಮುಂದುವರೆದಿದೆ.