Connect with us

BANTWAL

ಶರತ್ ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ, ಬಂಧನ ಭೀತಿಯಲ್ಲಿದ್ದ ಐವರಿಗೆ ಜಾಮೀನು

Share Information

ಮಂಗಳೂರು, ಜುಲೈ. 26 : ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ಕಲ್ಲು ತೂರಾಟಕ್ಕೆ ಪ್ರಚೋದಿಸಿದ್ದ ಆರೋಪದಲ್ಲಿ ಬಂಧನದ ಭೀತಿಯಲ್ಲಿದ್ದ ಹಿಂದೂಪರ ಸಂಘಟನೆಯ ಮುಖಂಡರುಗಳಿಗೆ ಜಮೀನು ಲಭಿಸಿದೆ. ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ  ಹಾಗೂ ಬಿಜೆಪಿ ನಾಯಕ ಸತ್ಯಜೀತ್ ಸುರತ್ಕಲ್, ಭಜರಂಗದಳದ ಸಂಚಾಲಕ ಶರಣ್ ಪಂಪ್ ವೆಲ್, ಹಿಂದೂ ಹಿತರಕ್ಷಣಾ ವೇದಿಕೆಯ ಸಂಚಾಲಕ ಹರೀಶ್ ಪೂಂಜ, ಭಜರಂಗದಳದ ಮುಖಂಡ ಪ್ರದೀಪ್ ಪಂಪ್ ವೆಲ್ ಹಾಗೂ ಮುರಳೀಕೃಷ್ಣ ಹಸಂತಡ್ಕ ಅವರುಗಳಿಗೆ ನೀರಿಕ್ಷಾಣಾ ಮಂಜೂರು ಮಾಡಿ ದ.ಕ. ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
ಆರೆಸ್ಸೆಸ್ ಕಾರ್ಯಕರ್ತ ಶರತ್ ಶವ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಲು ಪ್ರಚೋದನೆ ನೀಡಿದ ಆರೋಪದಡಿ ಕಲಂ 308 ರಡಿ ಕೇಸು ದಾಖಲಿಸಿದ್ದ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಂಧನದ ಭಿತಿ ಎದುರಾಗಿದ್ದ ಈ ನಾಯಕರು ಜುಲೈ 7 ರಿಂದ ತಲೆಮರೆಸಿಕೊಂಡಿದ್ದರು. ಇದೀಗ ಜಾಮೀನು ಮಂಜೂರು ಆಗಿದ್ದರಿಂದ ನಿರಾಳವಾಗಿದ್ದಾರೆ.

 


Share Information
Advertisement
Click to comment

You must be logged in to post a comment Login

Leave a Reply