Connect with us

    LATEST NEWS

    ವೃಕ್ಷ ಸೇವೆಯ ಮೂಲಕ ಗಣೇಶ ಚತುರ್ಥಿ: ಮಾದರಿಯಾದ ಉರ್ವ ಮಹಾಗಣಪತಿ ದೇವಾಲಯ

    ಮಂಗಳೂರು, ಆಗಸ್ಟ್ 26 : ಮಂಗಳೂರಿನ ಉರ್ವ ಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಈ ಬಾರಿ ವಿಶಿಷ್ಟವಾಗಿ ಗಣೇಶ ಚತುರ್ಥಿ ಆಚರಿಸಲಾಯಿತು. ಎಲ್ಲೆಡೆ ಚೌತಿ ಪ್ರಯುಕ್ತ ಪೂಜೆ ಪುನಸ್ಕಾರ ನಡೆದರೆ ಈ ದೇವಾಲಯದಲ್ಲಿ ವಿಶೇಷ ವೃಕ್ಷ ಸೇವೆ ನಡೆಸಲು ಭಕ್ತರಿಗೆ ಅವಕಾಶ ನೀಡಲಾಯಿತು.
    ಪ್ರಕೃತಿ ಆರಾಧನೆಯ ಒಂದು ಭಾಗವಾಗಿರುವ ಗಣೇಶ ಚತುರ್ಥಿಯನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(NCF) ಉರ್ವಾ ಮಹಾಗಣಪತಿ ದೇವಾಲಯದಲ್ಲಿ ವಿಶಿಷ್ಟ ಸೇವೆಗೆ ಏರ್ಪಾಡು ಮಾಡಿತ್ತು .ಇದಕ್ಕೆ ಮಹಾಗಣಪತಿ ದೇವಾಲಯದ ಆಡಳಿತ ಮಂಡಳಿ ಕೂಡ ಸಂಪೂರ್ಣ ಸಹಕಾರ ನೀಡಿತ್ತು. ಚೌತಿಯ ಪ್ರಯುಕ್ತ ದೇವಾಲಯದ ಸೇವಾ ಕೌಂಟರ್ ನಲ್ಲಿ ಐವತ್ತು ರೂಪಾಯಿ ವೃಕ್ಷ ಸೇವಾ ರಶೀದಿ ಮಾಡಿಸಿ ಬಳಿಕ ದೇವಾಲಯದ ವಠಾರದಲ್ಲಿ ಭಕ್ತರಿಗೆ ವಿವಿಧ ಜಾತಿಯ ಗಿಡಗಳನ್ನು ನೆಡುವ ಅವಕಾಶ ನೀಡಲಾಯಿತು .ಕದಂಬ, ಶ್ರೀಗಂಧ, ಚಂದನ, ಬಂಟ ಕೇಪು, ಹತ್ತಿ, ಅಶೋಕ ಆಲ,ಪುನರ್ಪುಳಿ,ದಾಲ್ಚಿನ್ನಿ,ಹುಣಸೆ, ರಾಮ ಪತ್ರ ಬಿಲ್ವ, ಚೇರಿ ಹೀಗೆ ಹಲವಾರು ಬಗೆಯ ವೃಕ್ಷ ವಾಗಿ ಬೆಳೆಯಬಲ್ಲ ಪುಟ್ಟ ಗಿಡಗಳನ್ನು ಭಕ್ತರಿಗೆ ನೀಡಿ ಅವರ ಕೈಯಾರೆ ನೆಡಿಸಲಾಯಿತು. ಎಲ್ಲಾ ಭಕ್ತರು ನೆಟ್ಟ ಗಿಡಗಳಿಗೆ ಅವರ ಹೆಸರು ,ವಿಳಾಸ, ದೂರವಾಣಿ ಸಂಖ್ಯೆ ಬರೆದು ಅವರು ನೆಟ್ಟ ಗಿಡಕ್ಕೆ ಟ್ಯಾಗ್ ಮಾಡಲಾಯಿತು.ದೇವಾಲಯಕ್ಕೆ ಬಂದ ಕೆಲವರು ಪ್ರಸಾದ ರೂಪದಲ್ಲಿ ತಮಗೆ ಬೇಕಾದ ಗಿಡಗಳನ್ನು ಎಲ್ಲಿಂದ ಅವರ ಮನೆಗೆ ತೆಗೆದುಕೊಂಡು ಹೋದರು.ಮಿತಿ ಮೀರಿ ಅಭಿವೃದ್ದಿ, ಭಾರಿ ಪ್ರಮಾಣದಲ್ಲಿ ಕೈಗಾರಿಕೆಗಳು ಈ ಕರಾವಳಿಗೆ ಬರುತ್ತಿರುದರಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕರಾವಳಿ ಇದೀಗ ಬರಡಾಗಿ ಮರುಭೂಮಿಯಂತಾಗುತ್ತಿರುವ ಈ ದಿನಗಗಳಲ್ಲಿ ಪ್ರಕೃತಿಯನ್ನು ಬೇಳೆಸುವ ಇಂತಹ ಸೇವೆ ದೇವಾಲಯ, ಮಸೀದಿ , ಚರ್ಚ್ ಸೇರಿದಂತೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೆ ನಡೆಸಿದರೆ, ಒಂದೆಡೆ ಧಾರ್ಮಿಕ ಕಾರ್ಯವೂ ನಡೆಯಲಿದೆ ಇನ್ನೊಂದೆಡೆ ಪ್ರಕೃತಿಯ ಸೇವೆಯೂ ಮಾಡಿದಂತಾಗುತ್ತದೆ ಎನ್ನುತ್ತಾರೆ ಸಹ್ಯಾದ್ರಿ ಸಂಚಯದ ಮಾರ್ಗದರ್ಶಕ ದಿನೇಶ್ ಹೊಳ್ಳ. ಒಟ್ಟಾರೆಯಾಗಿ ಎನ್ ಸಿ ಎಫ್ ನ ಈ ಕಾರ್ಯ ಪರಿಸರ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply