Connect with us

LATEST NEWS

ವಿಜ್ಞಾನಿ ಪ್ರೊ. ಯು.ಆರ್ ರಾವ್ ನಿಧನ ಉಡುಪಿ ಪೇಜಾವರ ಶ್ರೀ ಗಳಿಂದ ತೀವ್ರ ಸಂತಾಪ..

ಉಡುಪಿ,ಜುಲೈ.24 : ಪದ್ಮ ವಿಭೂಷಣ, ವಿಜ್ಞಾನಿ ಪ್ರೊ. ಯು.ಆರ್ ರಾವ್ ನಿಧನ ಉಡುಪಿ ಪೇಜಾವರ ಶ್ರೀ ಗಳು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ,ಇದು ಅತ್ಯಂತ ದುಃಖದ ಘಟನೆಯಾಗಿದೆ. ರಾವ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದ ವಿಜ್ಞಾನಿ ಆಗಿದ್ದು, ಕರ್ನಾಟಕ ಮತ್ತು ಉಡುಪಿ ಹೆಮ್ಮೆ ಪಡುವ ವಿಚಾರವಾಗಿದೆ. ಅವರ ಆರೋಗ್ಯ ವಿಚಾರಿಸಲೆಂದು ಫೋನ್ ನಂಬರ್ ತರಿಸಿಕೊಂಡಿದ್ದೆ ಆದರೆ ಅಷ್ಟರಲ್ಲೇ ಯು.ಆರ್ ರಾವ್ ನಮ್ಮನ್ನು ಅಗಲಿದ್ದಾರೆ. .ಇದು ನಮ್ಮ ಮನಸ್ಸಿಗೆ ಖೇದವಾಗಿದ್ದು ಅವರಿಗೆ ಪರಮಾತ್ಮ ಸದ್ಗತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ.ಅವರಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಟ್ಟಿಲ್ಲ, ಆದ್ರೆ ಈಗ ಅದರ ಚರ್ಚೆ ಮಾಡಿ ಪ್ರಯೋಜನವಿಲ್ಲ.ಯು.ಆರ್ ರಾವ್ ಗೆ ಭಾರತೀಯರೆಲ್ಲರು ಕೃತಜ್ಞತೆ ಅರ್ಪಿಸಬೇಕು ಎಂದು ಪೇಜಾವರ ಶ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

comments