Connect with us

    LATEST NEWS

    ಕೃಷ್ಣ ಮಠಕ್ಕೆ ಸಚಿವ ರೋಶನ್ ಬೇಗ್ ಭೇಟಿ,ಇಫ್ತಾರ್ ಕೂಟ ಆಯೋಜಿಸಿದ್ದ ಪೇಜಾವರ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದ ಸಚಿವ..

    ಉಡುಪಿ, ಜುಲೈ.24 : ಕೃಷ್ಣಮಠಕ್ಕೆ ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ಭೇಟಿ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಮಠದಲ್ಲಿ ಪೇಜಾವರ ಶ್ರೀ ಗಳಿಗೆ ಗೌರವ ಸಲ್ಲಿಸಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ರಂಜಾನ್ ಸಂದರ್ಭ ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟ ಆಯೋಜಿಸಿದ್ದರು,

    ಇದಕ್ಕಾಗಿ ಸಮುದಾಯದ ಪರವಾಗಿ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ.ಕರಾವಳಿಯಲ್ಲಿ ಶಾಂತಿ ಸೌಹಾರ್ಧತೆ ಮರು ಸ್ಥಾಪನೆಯಾಗಲು ಇಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರಂಜಾನ್ ಗೆ ಸ್ವಾಮೀಜಿ ಇಫ್ತಾರ್ ಕೊಟ್ಟಂತೆ ದೀಪಾವಳಿಗೆ ನಮ್ಮ ಧರ್ಮದ ಗುರುಗಳು ಅವರನ್ನು ಊಟಕ್ಕೆ ಕರೆಯಬೇಕು.ವಿವಾದಗಳು ಸಹಜ, ವಿವಾದ ಮಾಡೋರಿಗೆ ದೇವರು ಒಳ್ಳೆಬುದ್ದಿಯನ್ನು ಕೊಡಲಿ ಎಂದರು.


    ಹಿಂದುತ್ವ ಚಿಂತನೆ ಹತ್ತಿಕ್ಕುವ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರೀಯಿಸದ ಸಚಿವರು ಸಿಎಂ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ನುಡಿದರು. ಸಿಎಂ ಆಗುವ ಮುಂಚೆಯೂ ಅದೇ ವೈಚಾರಿಕತೆ ಹೊಂದಿದ್ದರು.ವೇಣುಗೋಪಾಲ್ ಅವರು ರಾಜ್ಯ ಉಸ್ತುವಾರಿ ಆದ ನಂತರದ ಮೂಡಿದ ಅಭಿಪ್ರಾಯವಲ್ಲ ಅದು, ಅಹಿಂದ ಅವರ ಪ್ರೀತಿಯ ಕಾನ್ಸೆಪ್ಟ್ ಆದ್ದರಿಂದ ವೇಣುಗೋಪಾಲ್ ಗೂ ಸಿಎಂ ರ ಈ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸಚಿವ ರೋಶನ್ ಬೇಗ್ ಸ್ಪಷ್ಟಪಡಿಸಿದರು.

     

     

     

     

     

     

     

     

     

    .

    Share Information
    Advertisement
    Click to comment

    You must be logged in to post a comment Login

    Leave a Reply