LATEST NEWS
ನವೆಂಬರ್ 15 ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ
ನವೆಂಬರ್ 15 ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ
ಮಂಗಳೂರು ನವೆಂಬರ್ 10: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮ ಮಂಗಳೂರಿನಲ್ಲಿ ನವೆಂಬರ್ 15 ರಂದು ನಡೆಯಲಿದೆ.
ಮಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸಹಕಾರ ಸಂಸ್ಥೆಗಳು- ಉತ್ಪಾದಕರಿಂದ ಗ್ರಾಹಕರವರೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಸಪ್ತಾಹ ನಡೆಯಲಿದೆ ಎಂದು ತಿಳಿಸಿದರು. ರಾಜ್ಯಮಟ್ಟದ ಸಹಕಾರ ಸಪ್ತಾಹವನ್ನು ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ ಹಾಗೂ ಸಹಕಾರ ಜಾಥಾವನ್ನು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಿಂದ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ ರಾಜೇಂದ್ರ ಕುಮಾರ್. ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಎಸ್ ಸಿಡಿಸಿಸಿ ಬ್ಯಾಂಕ್ ನ ಪ್ರಧಾನ ಕಚೇರಿ ಆವರಣದಿಂದ ನೆಹರೂ ಮೈದಾನದವರೆಗೆ ಆಕರ್ಷಕ ಮರೆವಣಿಗೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯ ಸಹಕಾರ ಮತ್ತು ಸಂಸ್ಕೃತಿ ಬಿಂಬಿಸುವ ವಿವಿಧ ಸ್ತಬ್ದ ಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ, ಕೇರಳ ಚಂಡೆ, ಕಲ್ಲಡ್ಕ ಗೊಂಬೆ ಸೇರಿದಂತೆ ಸುಮಾರು 22 ವಿವಿಧ ಮನೋರಂಜನಾ ತಂಡಗಳು ಈ ಜಾಥಾದಲ್ಲಿರಲಿವೆ ಎಂದು ತಿಳಿಸಿದರು.
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ…!
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಕಾಳಿದೇವಿಯ ಮಂತ್ರ ಪಠಣ ಪ್ರಯೋಜನ.
ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಫಲಾಫಲವನ್ನು ತಿಳಿಯೋಣ.
You must be logged in to post a comment Login