Connect with us

LATEST NEWS

ರಾಜರಾಜೇಶ್ವರ ಸನ್ನಿಧಿಗೆ ಅಮಿತ್ ಶಾ

ರಾಜರಾಜೇಶ್ವರ ಸನ್ನಿಧಿಗೆ ಅಮಿತ್ ಶಾ

ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದಾರೆ . ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಕೇರಳದ ಬಿಜೆಪಿ ಘಟಕ ಆಯೋಜಿಸಿರುವ ಬೃಹತ್ ಜನರಕ್ಷಾ ಪಾದಯಾತ್ರೆಯಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.ಕೇರಳದ ಕಣ್ಣೂರಿನಿಂದ ಆರಂಭಗೊಳ್ಳುವ ಈ ಬೃಹತ್ ಜನರಕ್ಷಾ ಪಾದಯಾತ್ರೆಗೆ ಅಮಿತ್ ಶಾ ಚಾಲನೆ ನೀಡಿದ್ದಾರೆ .ಈ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದ ಕಣ್ಣೂರಿನ ರಾಜರಾಜೇಶ್ವರ ದೇವಾಲಯಕ್ಕೆ ಇಂದು ಮುಂಜಾನೆ ಭೇಟಿ ನೀಡಿದರು.ದೇವಾಲಯದಲ್ಲಿ ರಾಜರಾಜೇಶ್ವರನ ದರ್ಶನ ಪಡೆದ ಅಮಿತ್ ಶಾ , ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ , ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಮ್ ರಾಜಶೇಖರ್ , ಪ್ರಧಾನ ಕಾರ್ಯದರ್ಶಿ ಕೆ, ಸುರೇಂದ್ರನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .