DAKSHINA KANNADA
ರಮಾನಾಥ ರೈ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ : ಹರಿಕೃಷ್ಣ ಬಂಟ್ವಾಳ್ ಸವಾಲು
ರಮಾನಾಥ ರೈ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ : ಹರಿಕೃಷ್ಣ ಬಂಟ್ವಾಳ್ ಸವಾಲು
ಬಂಟ್ವಾಳ. ಡಿಸೆಂಬರ್ 31 : ಜನಾರ್ದನ ಪೂಜಾರಿ ಮೇಲೆ ನನಗೆ ಅಪಾರ ಗೌರವವಿದೆ. ಅವರ ಕುರಿತು ತಾನೂ ಏನನ್ನೂ ಮಾತನಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರು ಬಿ. ರಮಾನಾಥ ರೈ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಈ ಬಗ್ಗೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾನು ಈ ಬಗ್ಗೆ ಈ ಹಿಂದೆಯೇ ಸುದ್ದಿಗೋಷ್ಟಿಯಲ್ಲಿ ರಮಾನಾಥ ರೈ ಅವರಿಗೆ ತಾಕತ್ತು ಇದ್ದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದೆ. ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದ ಬಂಟ್ವಾಳ್, ಗಂಟೆಗೊಂದು ಪಕ್ಷ ಸೇರುವ ಜಾತಿಗೆ ನಾನು ಸೇರಿದವ ಅಲ್ಲ ಎಂಬ ರೈ ಅವರ ಹೇಳಿಕೆಗೆ 1981 ರಲ್ಲಿ ಕಾಂಗ್ರೆಸ್ ಸೇರಿದ್ದ ರೈ ಅದಕ್ಕೂ ಮುನ್ನ ಜನತಾ ಪಕ್ಷದಲ್ಲಿದ್ದರು ಎಂಬುವುದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.
You must be logged in to post a comment Login