Connect with us

    DAKSHINA KANNADA

    ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017

    ಮಂಗಳೂರು ಅಗಸ್ಟ್ 5: ನಮ್ಮ ಹಿರಿಯರು ನಮಗೆ ನೀಡಿದ ಧಾರ್ಮಿಕ ಸಂಸ್ಕಾರದ ಪರಿಣಾಮ ಯಕ್ಷಗಾನದಂತಹ ಸುವಿಚಾರಗಳು ಬೆಳೆಯುತ್ತಿವೆ. ಆದರೆ ನಾವು ಮಕ್ಕಳಿಗೆ ಈ ತಿಳುವಳಿಕೆ ನೀಡದೇ ಹೋದರೆ ಅವರು ಉತ್ತಮ ವಿಚಾರಗಳಿಂದ ವಂಚಿತರಾಗಿ ಮೌಡ್ಯಗಳಿಗೆ ಬಲಿಯಾಗುವ ಹಾಗೂ ಸಾಂಸ್ಕತಿಕ ಸಂಸ್ಕಾರಗಳಿಂದ ವಿಚಲಿತರಾಗುವ ಭೀತಿ ಇದ್ದು ಆದಷ್ಟು ಈ ಕಾರ್ಯಕ್ರಮಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸಬೇಕು ಎಂದರು.

    ಅವರು ಮಂಗಳವಾರ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷದ ಸಂಯುಕ್ತ ಆಶ್ರಯದಲ್ಲಿ ಸಹಯೋಗದೊಂದಿಗೆ ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017 ಪ್ರಯುಕ್ತ ಕರ್ಣಾಟಕ ಬ್ಯಾಂಕ್ ಯಕ್ಷಗಾನ ತಾಳಮದ್ದಲೆ ಸಪ್ತಾಹದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಕಲಾವಿದರ ನೆಲೆಯಲ್ಲಿ ಉಮೇಶ್ ಶೆಟ್ಟಿ ಮಚ್ಚಾರು ಅವರನ್ನು ಯಕ್ಷಗಾನಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಅತಿಥಿಗಳಾಗಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ , ಕೊಡೆತ್ತೂರು ದೇವಸ್ಯ ಮಠದ ಸುಧಾ ವೇದವ್ಯಾಸ ಉಡುಪ, ಮೂಡಬಿದಿಯ ಉದ್ಯಮಿ ಶ್ರೀಪತಿ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ,ಉಮೇಶ್ ನೀಲಾವರ್, ಶ್ರೀವತ್ಸ , ಅಶೋಕ ಆಚಾರ್ಯ,ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಯುಗಪುರುಷದ ಭುವನಾಭಿರಾಮ ಉಡುಪ, ವಿನಯ ಆಚಾರ್, ವಸಂತ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply