ಮಂಗಳೂರು ಅಗಸ್ಟ್ 06: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿಯನ್ನು ಮಂಗಳೂರು ಪೊಲೀಸರು ಮುಂಬಯಿಯ ಥಾಣೆಯಲ್ಲಿ ಬಂಧಿಸಿದ್ದಾರೆ .2003 ರಲ್ಲಿ ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಎಂಬಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಪ್ರಕರಣದ ಪ್ರಮುಖ ಆರೋಪಿ ಈ ವಿನೇಶ್ ಶೆಟ್ಟಿ . ಮುಡಿಪುವಿನ ಮಂಗಳ ಬಾರ್ ಬಳಿ ವೇಣುಗೋಪಾಲ್ ನಾಯಕ್ ಹಾಗೂ ಡ್ರೈವರ್ ಸಂತೋಷ್ ಶೆಟ್ಟಿ ಎಂಬವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿನೇಶ್ ಶೆಟ್ಟಿ ಎಂದು ಹೇಳಲಾಗಿದೆ.ಮುಂಬೈ, ಬೆಳಗಾಂ ಹಾಗೂ ಮಂಗಳೂರಿನಲ್ಲಿ ನಡೆದ ಹಲವಾರು ಹತ್ಯೆ ,ಹತ್ಯೆ ಯತ್ನ, ಕಿಡ್ನಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಿನೇಶ್ ಶೆಟ್ಟಿಯನ್ನು ಮಂಗಳೂರಿನ ಕೊಣಾಜೆ ಠಾಣೆಯ ಪೊಲೀಸರು ಮುಂಬಯಿಯ ಥಾಣೆಯಲ್ಲಿ ಬಂಧಿಸಿದ್ದಾರೆ . ಉಡುಪಿಯ ಶಿರ್ವ ನಿವಾಸಿಯಾಗಿರುವ ವಿನೇಶ್ ಶೆಟ್ಟಿ ಮುಡಿಪು ಡಬಲ್ ಮರ್ಡರ್ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ನಂತರ ಪರಾರಿಯಾಗಿದ್ದ. ಮಂಗಳೂರು ಕೋರ್ಟಿನಿಂದ ಬಾಡಿ ವಾರೆಂಟ್ ಪಡೆದು  ಮಂಬೈಗೆ ತೆರಳಿದ ಮಂಗಳೂರು ಪೋಲಿಸರ ತಂಡ ಥಾಣೆಯಲ್ಲಿ ಬಂಧಿಸಿದ್ದಾರೆ .ಛೋಟಾ ರಾಜನ್ ಗ್ಯಾಂಗ್ ನಲ್ಲಿ ಸಕ್ರಿಯನಾಗಿದ್ದ ವಿನೇಶ್ ಶೆಟ್ಟಿ ಹಲವಾರು ಹತ್ಯೆ, ಹತ್ಯೆ ಪ್ರಯತ್ನ, ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಮುಂಬೈ ಪೊಲೀಸರಿಗೆ ಬೇಕಾಗಿದ್ದಾನೆ.

2 Shares

Facebook Comments

comments