LATEST NEWS
ಮೇಸ್ತಾ ಹತ್ಯೆ ಖಂಡಿಸಿ ಬಂದ್ ಆದ ಗಂಗೊಳ್ಳಿ

ಮೇಸ್ತಾ ಹತ್ಯೆ ಖಂಡಿಸಿ ಬಂದ್ ಆದ ಗಂಗೊಳ್ಳಿ
ಉಡುಪಿ ಡಿಸೆಂಬರ್ 19: ಪರೇಶ್ ಮೇಸ್ತಾ ಹತ್ಯೆ ಖಂಡಿಸಿ ಗಂಗೊಳ್ಳಿಯ ಸ್ವಯಂಪ್ರೇರಿತವಾಗಿ ಬಂದ್ ಆದ ಗಂಗೊಳ್ಳಿ. ಹೊನ್ನಾವರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪರೇಶ್ ಮೆಸ್ತ ಹತ್ಯೆಯನ್ನು ಖಂಡಿಸಿ ಇಂದು ಗಂಗೊಳ್ಳಿಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಗಂಗೊಳ್ಳಿಯಿಂದ ತ್ರಾಸಿವರೆಗೆ ನಡೆಯಲಿರುವ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಜಾಥಾ ನಡೆಯಲಿದೆ.
ಈ ಜಾಥಾದಲ್ಲಿ ಸಾವಿರಕ್ಕಿಂತ ಹೆಚ್ಚು ಜನ ಭಾಗಿಯಾಗಿದ್ದು, ಮೇಸ್ತಾ ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಗಂಗೊಳ್ಳಿಯಲ್ಲಿ ಮಸ್ತಾ ಹತ್ಯೆ ಖಂಡಿಸಿ ಪ್ರತಿಭಟನಾ ಜಾಥಾ ನಡೆಯುತ್ತಿರುವ ಹಿನ್ನಲೆಯಲ್ಲಿ ಗಂಗೊಳ್ಳಿಯಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಜನರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
