Connect with us

    DAKSHINA KANNADA

    ಅಪ್ರಾಪ್ತ ಬಾಲಕಿಗೆ ಕಿರುಕುಳ, ಸಂಪ್ಯ ಠಾಣೆಯ ಮುಂದೆ ಮತ್ತೆ ಸಂಘಟನೆಗಳ ಜಗಳ

    ಅಪ್ರಾಪ್ತ ಬಾಲಕಿಗೆ ಕಿರುಕುಳ, ಸಂಪ್ಯ ಠಾಣೆಯ ಮುಂದೆ ಮತ್ತೆ ಸಂಘಟನೆಗಳ ಜಗಳ

    ಪುತ್ತೂರು, ಡಿಸೆಂಬರ್ 19: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವ್ಯಕ್ತಿಯೊಬ್ಬ ಚುಡಾಯಿಸಿದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಸಮೀಪದ ಮೈಂದನಡ್ಕ ಎಂಬಲ್ಲಿ ನಡೆದಿದೆ.

    ಈ ಸಂಬಂಧ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಯೂಸುಫ್ (48) ಎನ್ನುವ ಲಾರಿ ಚಾಲಕನಿಗೆ ಹಲ್ಲೆ ನಡೆಸಿದ್ದರು.

    ಬಳಿಕ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಯೂಸುಫ್ ನನ್ನು ಸಂಪ್ಯ ಪೋಲೀಸ್ ಠಾಣೆಗೆ ತಂದೊಪ್ಪಿಸಿದ್ದರು.

    ಇದೇ ಸಂದರ್ಭದಲ್ಲಿ ಯೂಸುಫ್ ಗೆ ಬೆಂಬಲವಾಗಿ ಬಂದ ಪಿ.ಎಫ್.ಐ ಹಾಗೂ ಇತರ ಮುಸ್ಲಿಂ ಸಂಘಟನೆಗಳು ಕಾರ್ಯಕರ್ತರೂ ಪೋಲೀಸ್ ಠಾಣೆಯ ಬಳಿ ಸೇರಿದ್ದರು.

    ಹಿಂದೂ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಪೋಲೀಸ್ ಠಾಣೆಯ ಮುಂಭಾಗದಲ್ಲಿ ಸೇರಿದ ಹಿನ್ನಲೆಯಲ್ಲಿ ಪೋಲೀಸರು ಎರಡೂ ಗುಂಪುಗಳನ್ನು ಚದುರಿಸಲು ಲಘುವಾಗಿ ಲಾಠಿಯನ್ನೂ ಚಲಾಯಿಸಿದ್ದರು.

    ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಪರವಾಗಿ ಬಂದಿದ್ದ ಭಜರಂಗದಳದ ಪ್ರಾಂತ ಗೋರಕ್ಷಾ ಪ್ರಮುಖ್ ಮುರಳೀ ಹಸಂತಡ್ಕ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ಅಜಿತ್ ರೈ ಹೊಸಮೂಲೆ ಸೇರಿದಂತೆ 7 ಮಂದಿಯ ಮೇಲೆ ಹಾಗೂ ಇನ್ನೊಂದು ತಂಡಕ್ಕೆ ಸೇರಿದ 7 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಆದರೆ ಕಳೆದ ಹಲವು ದಿನಗಳಿಂದ ಸಂಪ್ಯ ಠಾಣೆ ಹಾಗೂ ಹಿಂದೂ ಸಂಘಟನೆಗಳ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ವೇದಿಕೆಯನ್ನಾಗಿ ಬಳಸಿಕೊಂಡ ಸಂಪ್ಯ ಪೋಲೀಸರು ಹಿಂದೂ ಜಾಗರಣ ವೇದಿಕೆಯ ಅಜಿತ್ ರೈ ಹೊಸಮೂಲೆ, ಶಶಿಕುಮಾರ್,ರಜನೀಶ್ ಹಾಗೂ ಇತರರ ಮೇಲೆ ಬರೋಬ್ಬರಿ 3 ಲಾಠಿ ಮುರಿಯುವ ಹಾಗೆ ಬಾರಿಸಿದ್ದಾರೆ.

    ಅಲ್ಲದೆ ಪೋಲೀಸ್ ಠಾಣೆಯಲ್ಲಿ ಬಹಳ ಕಡಿಮೆ ಯೂಸ್ ಆಗುವ ಗನ್ ನ ಕಡೆ ಕೊಡಿಯಲ್ಲಿ ಗುದ್ದಿದ್ದಾರೆ. ಇದರಿಂದಾಗಿ ಅಜಿತ್ ರೈ ಮೊಣಕಾಲಿನ ಮೂಳೆ ಮುರಿದಿದ್ದು, ಬೆನ್ನು ತುಂಬಾ ಪೋಲೀಸರು ಪರಚಾಡಿದ, ಹಲ್ಲೆ ನಡೆಸಿದ ಗಾಯಗಳಾಗಿವೆ.

    ಅದರಲ್ಲೂ ಹಿಂದೂ ಸಂಘಟನೆಗಳ ನೇರ ಆರೋಪಕ್ಕೆ ಗುರಿಯಾಗಿದ್ದ ಪೋಲೀಸ್ ಪೇದೆ ಚಂದ್ರ, ಎಸೈ ಅಬ್ದುಲ್ ಖಾದರ್ ಸಂಘಟನೆಗಳ ಮೇಲೆ ತಮ್ಮ ಹಳೆ ವೈಷ್ಯಮ್ಯವನ್ನು ಈ ಅವಕಾಶವನ್ನು ಬಳಸಿ ಸಾಧಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

    ಬಾಲಕಿಗೆ ಚುಡಾಯಿಸಿದ ಘಟನೆ ತಿಳಿದ ತಕ್ಷಣ ಪೋಲೀಸರು ಆತನನ್ನು ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸುವುದು ಬಿಟ್ಟು ಅವನ ಸಂಬಂಧಿಕರು, ನೆಂಟರಿಸ್ಟರು ಬರುವ ತನಕ ಪೋಲೀಸ್ ಠಾಣೆಯಲ್ಲಿ ಇರಿಸುವ ಅಗತ್ಯವೇನಿತ್ತು ಎನ್ನುವುದು ಪ್ರಶ್ನೆ ಕೇಳಿ ಬರುತ್ತಿದೆ.

    ಕಡೆಯ ಗುಂಪು ಪೋಲೀಸ್ ಠಾಣೆಯ ಮುಂದೆ ಸೇರುವುದಕ್ಕೆ ಅವಕಾಶ ಕೊಟ್ಟಿರುವುದು ನಿನ್ನೆಯ ಘಟನೆ ಇಷ್ಟೊಂದು ಬೆಳೆಯಲು ಕಾರಣವಾಗಿದೆ.

    ಈ ನಡುವೆ ಪೋಲೀಸರು ಹಿಂದೂ ಸಂಘಟನೆಯ ಮುಖಂಡರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಪುತ್ತೂರು ಬಂದ್ ನಂತಹ ಪ್ರತಿಭಟನೆ ನಡೆಸಲೂ ಸಿದ್ಧತೆ ನಡೆಸುತ್ತಿದ್ದಾರೆ.

    ಈ ಬಗ್ಗೆ ಇಂದು ಸಂಜೆ ಪುತ್ತೂರಿನಲ್ಲಿ ಹಲವು ಸಂಘಟನೆಗಳ ಮುಖಂಡರು ಬೈಟಕ್ ಕೂಡಾ ನಡೆಸಲಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply