Connect with us

  LATEST NEWS

  ಮೀನುಗಾರಿಕಾ ದೋಣಿ ದುರಂತ : ಒರ್ವ ಸಮುದ್ರ ಪಾಲು

  ಮಂಗಳೂರು, ಅಗಸ್ಟ್ 27 : ಮೀನುಗಾರಿಕೆಗೆ ತೆರಳಿದ್ದ ನಾಡ ದೋಣಿಯೊಂದು ಮಗುಚಿದ ಪರಿಣಾಮ ಓರ್ವ ಮೀನುಗಾರ ಸಮುದ್ರಪಾಲದ ಘಟನೆ ಮಂಗಳೂರಿನ ಸುರತ್ಕಲ್ ಸಸಿಹಿತ್ಲು ಬಳಿ ಸಮುದ್ರದಲ್ಲಿ ಸಂಭವಿಸಿದೆ. ಸಮುದ್ರಪಾಲದ ಯುವಕನನ್ನು 25 ವರ್ಷದ ತರುಣ್ ಎಂದು ಗುರುತ್ತಿಸಲಾಗಿದೆ. ಇಂದು ಬೆಳಗ್ಗೆ ಹೆಜಮಾಡಿಯಿಂದ 9 ಜನ ಮೀನುಗಾರರು ಈ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು, ಸಸಿಹಿತ್ಲು ಬಳಿ ಸಮುದ್ರದ ಅಲೆಗಳಿಗೆ ಸಿಕ್ಕಿ ದೋಣಿ ಮಗುಚಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ಸಮುದ್ರ ಪಾಲಾಗಿದ್ದ 9 ಜನರಲ್ಲಿ 8 ಮಂದಿಯನ್ನು ರಕ್ಷಿಸಲು ಯಶಸ್ವಿಯಾಗಿದ್ದು, ತರುಣ್ ನನ್ನು ರಕ್ಷಣೆ ಮಾಡಲು ಸಾಧ್ಯವಾಗದೆ ಅತ ಸಮುದ್ರಪಾಲಾಗಿದ್ದಾನೆ. ತರುಣ್ ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

   

  Share Information
  Advertisement
  Click to comment

  You must be logged in to post a comment Login

  Leave a Reply