ಮಂಗಳೂರು, ಜುಲೈ 18: ಕಾರಿಗೆ ಹಿಂಬದಿಯಿಂದ ಗುದ್ದಿದಲ್ಲದೆ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾದ ಘಟನೆ ಮಂಗಳೂರು – ವಿಮಾನ ನಿಲ್ದಾಣ ರಸ್ತೆಯ ಪದವಿನಂಗಡಿ ಬಳಿ ನಡೆದಿದೆ.

 ಕೇರಳ ನೋಂದಾಯಿತ ಮಾರುತಿ ಡಿಝಾಯರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಮಹಿಳೆ ಮತ್ತು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಮೇಲೆ ಕೂಡ ಗಂಭೀರ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆರೋಪಿಗಳು ತಾವು ಬಂದ ಕಾರಿನಲ್ಲಿ ಪರಾರಿಯಾಗಿದ್ದು , ಪರಾರಿಯಾಗಿದ್ದ ಕಾರನ್ನು  kA 20.MB 140  ಕಪ್ಪು ಮಿಶ್ರತ ಬಿಳಿ ಬಣ್ಣದ್ದಾಗಿದೆ ಎಂದು ಗುರುತ್ತಿಸಲಾಗಿದ್ದು ,ಹಲ್ಲೆ ನಡೆಸಿ ಪರಾರಿಯಾದ ಆರೋಪಿಗಳನ್ನು ಬಂಧಿಸಲು ಪೋಲಿಸರು ಬಲೆ ಬೀಸಿದ್ದಾರೆ.

 

Facebook Comments

comments