Connect with us

LATEST NEWS

ಮಲ್ಪೆ ಕೋಡಿಬೆಂಗ್ರೆಯಲ್ಲಿ ಭಿನ್ನ ಕೋಮಿನ ಯುವಕ ಯುವತಿಯರಿಂದ ಅನುಚಿತ ವರ್ತನೆ – ಸ್ಥಳೀಯರ ವಿರೋಧ

ಕೋಡಿಬೆಂಗ್ರೆಯಲ್ಲಿ ಭಿನ್ನ ಕೋಮಿನ ಯುವಕ ಯುವತಿಯರಿಂದ ಅನುಚಿತ ವರ್ತನೆ – ಸ್ಥಳೀಯರ ವಿರೋಧ

ಉಡುಪಿ ಡಿಸೆಂಬರ್ 13: ಭಿನ್ನಕೋಮಿನ ಯುವಕ ಯುವತಿಯರಿಂದ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ಬರ್ತಡೇ ಪಾರ್ಟಿಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಘಟನೆ ನಡೆದಿದೆ.

ಉಡುಪಿ ಹಾಗೂ ಶೃಂಗೇರಿಗೆ ಸೇರಿದ ಭಿನ್ನ ಕೋಮಿನ ಆರು ಯುವಕ ಯುವತಿಯರಿಂದ ಮಲ್ಪೆಯ ಕೋಡಿಬೆಂಗ್ರೆಯಲ್ಲಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದರು. ಈ ಬರ್ತ ಡೇ ಪಾರ್ಟಿಯಲ್ಲಿ ಯುವಕ ಯುವತಿಯರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರಿಗೆ ಸ್ಥಳೀಯರು ಕೋಡಿಬೆಂಗ್ರೆ ಬೀಚ್ ಅನುಚಿತ ವರ್ತನೆಗೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಮೂವರು ಯುವಕರು ಮೂವರು ಯುವತಿಯರು ಮಲ್ಪೆ ಪೊಲೀಸರು ವಶಕ್ಕೆ ಪಡೆದರು. ನಂತರ ಪೊಲೀಸರು ಮುಚ್ಚಳಿಕೆ ಬರೆಸಿ ಪೋಷಕರ ಜೊತೆ ಯುವತಿಯರನ್ನು ಮನೆಗೆ ಕಳುಹಿಸಿದರು.