ಮಣಿಪಾಲದಲ್ಲಿ ಶಾಟ್ ಸರ್ಕೂಟ್ ಗೆ ಕಟ್ಟಡ ಭಸ್ಮ
ಉಡುಪಿ,ಮಾರ್ಚ್ 20: ಮಣಿಪಾಲದ ವಾಣಿಜ್ಯ ಸಮುಚ್ಛಯಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಿಂದಾಗಿ ಕಟ್ಟಡ ಬಹುತೇಕ ಬೆಂಕಿಗಾಹುತಿಯಾಗಿದೆ.
ಮಣಿಪಾಲದ ಈಶ್ವರನಗರದಲ್ಲಿರುವ ಸಪ್ತಮಿ ಎನ್ನುವ ವಾಣಿಜ್ಯ ಸಂಕೀರ್ಣದಲ್ಲಿ ಈ ಅವಘಡ ಸಂಭವಿಸಿದ್ದು, ಕಟ್ಟಡದ ನಾಲ್ಕು ಮಳಿಗೆಗೂ ಬೆಂಕಿ ಆವರಿಸಿಕೊಂಡಿದೆ.
ಕಟ್ಟಡದಲ್ಲಿರುವ ಪೇಂಟ್ ಅಂಗಡಿಯಲ್ಲಿ ಉಂಟಾದ ಶಾಟ್ ಸರ್ಕೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ.
ಬೆಂಕಿ ಪೇಂಟ್ ಅಂಗಡಿಯಲ್ಲದೆ, ಡಾಲ್ಫಿನ್ ಹೋಟೇಲ್ ತರಕಾರಿ ಅಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಸುಟ್ಟು ಹಾಕಿದೆ.
ಅಗ್ನಿಶಾಮಕ ದಳ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ.