Connect with us

  DAKSHINA KANNADA

  ಮಡಿಕೇರಿಯಲ್ಲಿ ರಮೇಶನ ಅವಾಂತರಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಗರಂ

  ಮಂಗಳೂರು, ಆಗಸ್ಟ್ 21 : ಮಡಿಕೇರಿಯಲ್ಲಿ ರಮೇಶನ ಅವಾಂತರಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಗರಂ ಆಗಿದೆ.ರಾಜ್ಯಾದ್ಯಂತ ಬಿಜೆಪಿ ಮಹಿಳಾ ಮೋರ್ಚಾ ಬೀದಿಗಿಳಿದಿದೆ. ಮಡಿಕೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ರೇಶ್ಮೆ ಮಂಡಳಿ ಅಧ್ಯಕ್ಷ ಡಿ.ಪಿ ರಮೇಶ್ ಅವರ ಅಸಭ್ಯ ನಡವಳಿಕೆಯನ್ನು ಖಂಡಿಸಿ ಮಹಿಳಾ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಶ್ರಯದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಧ್ಯಕ್ಷೆ ಭಾರತಿ ಶೆಟ್ಟಿ ಕಾಂಗ್ರೆಸ್ ಆಡಳಿತಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಮಹಿಳೆಯರಿಗೆ ಅಭಧ್ರತೆ ಕಾಡುತ್ತಿದೆ. ಇದು ಸರ್ಕಾರಿ ಮಹಿಳೆಯನ್ನು ಬಿಟ್ಟಿಲ್ಲ ಎಂದ ಅವರು ಮಹಿಳಾ ಉದ್ಯೋಗಿಗಳು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಭ್ರಷ್ಟಚಾರ ಮತ್ತು ಅನೈತಿಕತೆ ಮಿತಿ ಮೀರಿದೆ ಎಂದ ಅವರು ಕಾಂಗ್ರೆಸ್ ಪುಡಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದಕ್ಕೆಮಡಿಕೇರಿ ಪ್ರಕರಣವೇ ಸಾಕ್ಷಿ ಎಂದ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ರೇಶ್ಮೆ ಮಂಡಳಿ ಅಧ್ಯಕ್ಷ ಡಿ.ಪಿ ರಮೆಶ್ ಅವರನ್ನು ಕೂಡಲೇ ಪಕ್ಷ ಹಾಗೂ ರೇಶ್ಮೆ ಮಡಳಿಯಿಂದ ವಜಾ ಮಾಡಬೇಕು ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ರಾಜ್ಯ ಉಪಾಧ್ಯಕ್ಷೆ ಜಿ.ಕೆ. ಸುಲೋಚನಾ ಭಟ್, ಮೋನಪ್ಪ ಭಂಡಾರಿ. ಸಂದ್ಯಾ, ರೂಪಾ ಡಿ ಬಂಗೇರಾ, ಮತ್ತಿತರ ಮಹಿಳಾ ಘಟಕದ ಪ್ರಮುಖರು ಪಾಲ್ಗೊಂಡಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply