ಮಂಗಳೂರು, ಆಗಸ್ಟ್ 12 :ಕಲ್ಲಡ್ಕದ ಶಾಲೆಗಳಿಗೆ ಅನುದಾನ ಕಡಿತ ಮಾಡಿರುವುದು ಅಕ್ಷಮ್ಯ ಅಪರಾದ ಮಕ್ಕಳ ಊಟ ಕಿತ್ತು ಕೊಂಡಿರುವುದು ರಾಕ್ಷಸಿ ಪ್ರವೃತ್ತಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದವರು ಶಾಲೆಗಳ ಅನುದಾನ ರದ್ದುಗೊಳಿಸಿದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಕುದ್ರೋಳಿ ದೇವಾಲಯದಲ್ಲಿ ಬಂದ ಭಕ್ತರಿಗೆ ಹಾಗೂ ಶಾಲಾ ಮಕ್ಕಳಿಗೆ ಊಟ ನೀಡುವ ಕಾರ್ಯ ದಶಕಗಳಿಂದ ನಡೆಯುತ್ತಿದೆ. ಮಕ್ಕಳಿಗೆ ಊಟ ನೀಡುವುದು ಪುಣ್ಯದ ಕೆಲಸ ಎಂದು ಅವರು ಹೇಳಿದರು ಶಾಲೆ ನಡೆಸಿ ಮಕ್ಕಳಿಗೆ ಊಟ ನೀಡುವುದು ಎಷ್ಟು ತ್ರಾಸದಾಯಕ ಕಾರ್ಯ ಎಂಬ ಅನುಭವವಿದೆ. ಈ ವಿಚಾರದಲ್ಲಿ ನಾನು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದರು .
ಸರ್ಕಾರ ಅನುದಾನ ನೀಡದಿದ್ದರೆ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಶಾಲಾ ಮಕ್ಕಳಿಗೆ ಊಟ ನೀಡುವುದಾಗಿ ಪ್ರಭಾಕರ ಭಟ್ ಹೇಳಿದ್ದಾರೆ, ಅದು ದೇವರ ಗುಣ, ಮಕ್ಕಳ ಊಟ ಕಿತ್ತುಕೊಳ್ಳುವುದು ರಾಕ್ಷಸಿ ಪ್ರವೃತ್ತಿ ಎಂದವರು ಕಿಡಿಕಾರಿದರು.  ಸಚಿವ ರಮಾನಾಥ ರೈ ಅವರಿಗೆ ಏನಾಗಿದೆ ಅವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಡಿದ ಶನಿ ಹಿಡಿದಿದೆ ಎಂದು ಅವರು ಕಿಡಿಕಾರಿದರು. ಅನುದಾನ ರದ್ದುಪಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಹೇಳಿದ ಅವರು ಮುಖ್ಯಮಂತ್ರಿಯವರ ಕಾಲು ಹಿಡಿದಾದರೂ ರಮಾನಾಥ ರೈ ಅನುದಾನ ಶಾಲೆಗೆ ಕೊಡಿಸಬೇಕು ಎಂದವರು ಕರೆ ನೀಡಿದರು . ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಚಿವ ರಮಾನಾಥ ರೈ ಅವರ ಸೋಲು ಖಚಿತ ಎಂದು ಅವರು ಹೇಳಿದರು .

ವಿಡಿಯೋಗಾಗಿ ಈ ಕೆಳಗಿನ ಲಿಂಕನ್ನು ಒತ್ತಿರಿ..