Connect with us

DAKSHINA KANNADA

ರಾತ್ರಿ ಹೊತ್ತು ಇನ್ನೇನಾದರು ಬೇರೆ ಮಾಡ್ತೀರಾ? ಸಿಎಂ ಗೆ ಪೂಜಾರಿ ಪ್ರಶ್ನೆ..!!??

ಮಂಗಳೂರು, ಆಗಸ್ಟ್.12 : ಹಗಲಿನಲ್ಲಿ ನಿಮಗೆ ಸಮಯ ಇರಲ್ಲ, ರಾತ್ರಿ ನಿಮಗೆ ಏನು ಕೆಲಸ ಇದೆ ? ರಾತ್ರಿ ಹೊತ್ತು ಇನ್ನೇನಾದರು ಬೇರೆ ಮಾಡ್ತೀರಾ ..?! ಅಥವಾ ರಾತ್ರಿ ಇಸ್ಪೀಟ್ ಆಡ್ತೀರಾ? ನಿಮಗೆ ರಾಜ್ಯಭಾರ ಮಾಡೋಕೆ ಆಗಲ್ವಾ? ಹೀಗೇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡವರು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ . ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳಿಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಡುವುದಕ್ಕೆ ಸಮಯವಿಲ್ಲ. ಎಂದು ಸಿದ್ದರಾಮಯ್ಯ ಅವರ ವಿರುದ್ದ ಹರಿಹಾಯ್ದ ಪೂಜಾರಿ ಅವರು “ರಾಜ್ಯಭಾರ ಮಾಡೋಕೆ ಆಗದಿದ್ದರೆ, ರಾಜೀನಾಮೆ ನೀಡಿ” ಎಂದು ಒತ್ತಾಯಿಸಿದರು. ನೀವು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ತುಂಬಾ ಕಷ್ಟವಿದೆ. ಕರ್ನಾಟಕದ ಜನರು ನಿಮ್ಮ ಉತ್ತರ ನಿರೀಕ್ಷೆಯಲ್ಲಿದ್ದಾರೆ. ನಿಮ್ಮ ಕಾಲ ಸನ್ನಿಹಿತವಾಗಿದೆ. ಕಾರ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ನಿಮಗಿಂತ ಪ್ರಬಲರಾಗುತ್ತಿದ್ದಾರೆ. ಮಾತ್ರವಲ್ಲ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು. ‘ಅಮಿತ್ ಶಾ ಕರ್ನಾಟಕ್ಕೆ ಬಂದಿದ್ದಾರೆ. ಅವರು ಬಂದಿರುವುದು ನಿಮ್ಮನ್ನು ಕೆಳಗಿಳಿಸೋಕೆ , ಹದಿನೆಂಟು ರಾಜ್ಯಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದ್ದಾರೆ. ಸಂಜೆಯೊಳಗೆ ರಾಜೀನಾಮೆ ಕೊಡಿ. ಹೈಕಮಾಂಡ್ ದಲಿತರನ್ನು ಮುಖ್ಯಮಂತ್ರಿ ಮಾಡಲಿ’ ಎಂದರು. ನನ್ನ ಸಹಮತವಿದೆ ಎಂದು ಪೂಜಾರಿ ಅವರು ಆಕ್ರೋಶ ವ್ಯಕ್ತಪಡಿಸಿದರು. ನಟ ಉಪೇಂದ್ರ ಅವರು ರಾಜಕೀಯಕ್ಕೆ ಬರುವ ಕುರಿತು ಪ್ರತಿಕ್ರಿಯೆ ನೀಡಿದ ಜನಾರ್ದನ ಪೂಜಾರಿ, ‘ಉಪೇಂದ್ರ ಅವರಲ್ಲಿ ಆಲೋಚನೆಗಳು ವಿಭಿನ್ನ.ಆದರೆ ಅವರು ಬೇರೆ ಪಕ್ಷವನ್ನು ಸೇರದೆ ಹೊಸ ಪಕ್ಷವನ್ನು ಕಟ್ಟಿದರೆ ಅವರ ಚಿಂತನೆಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಪೂಜಾರಿ ಅವರು ನುಡಿದರು.

ಸಿಎಂ ಸಿದ್ದರಾಮಯ್ಯ ಮೇಲೆ ಪೂಜಾರಿ ನಡೆಸಿದ ವಾಗ್ದಾಳಿಯ ವಿಡಿಯೊಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ..

Advertisement
Click to comment

You must be logged in to post a comment Login

Leave a Reply