Connect with us

LATEST NEWS

ಮಂಗಳೂರು ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಸಾವು

ಮಂಗಳೂರು, ಆಗಸ್ಟ್ 30 : ವಿಚಾರಣಾಧೀನ ಕೈದಿಯೊಬ್ಬ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾನೆ. ವಿಚಾರಣಾಧೀನ ಕೈದಿ ಶಿವಪ್ಪ (47) ಎಂಬವನೇ ಸಾವಿಗೀಡಾದ ಕೈದಿ. ಶಿವಪ್ಪ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ ಅರೋಪದಲ್ಲಿ 2016 ರಲ್ಲಿ ಸುಳ್ಯ ಪೋಲಿಸರಿಂದ ಪೋಕ್ಸೋ ಕಾಯ್ದೆಯಡಿ ಬಂಧಿಸಲ್ಪಟ್ಟು ಜೈಲು ಸೇರಿದ್ದ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ವೆನ್ಲಾಕ್ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply