Connect with us

UDUPI

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳು ಕೋರ್ಟಿಗೆ, ಇನ್ನೂ ನಿಂತಿಲ್ಲ VIP ಟ್ರೀಟ್ ಮೆಂಟ್

ಉಡುಪಿ,ಆಗಸ್ಟ್ 21 : ಹೋಟೇಲ್ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ನವನೀತ್ ಮತ್ತು ನಿರಂಜನ್ ಭಟ್ ರನ್ನು ಇಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಕ್ಕೆ ಹಾಜರು ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಜಾಮೀನು ಪಡೆದು ಹೊರಬಂದ ಶ್ರೀನಿವಾಸ್ ಭಟ್ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಕೋರ್ಟಿಗೆ ಹಾಜರಾಗಿದ್ದ ಆರೋಪಿಗಳನ್ನು ಐಷಾರಾಮಿ ವಾಹನದಲ್ಲಿ ಕರೆತಂದಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ. ಸದ್ಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ, ಮಂಗಳೂರಿನ ಜಿಲ್ಲಾ ಕಾರಗ್ರಹದಲ್ಲಿನ ಗುಂಡು ಪಾರ್ಟಿ ಹೀಗೆ  ಜೈಲುಗಳಲ್ಲಿನ ಆತಿಥ್ಯ ವಿಚಾರ ವನ್ನು ಗಮನಿಸಿದಾಗ ಜೈಲುಗಳಲ್ಲ್ಲೂಈ ರೀತಿಯ ಆತಿಥ್ಯ ದೊರೆಯುತ್ತಿದೆಯೇ ಎಂಬ ಸಂಶಯ ಮೂಡಿದೆ. 2016 ರ ಜುಲೈ ತಿಂಗಳಿನಲ್ಲಿ  ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಸ್ವಂತ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಸ್ವತ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಜಾಮೀನಿಗಾಗಿ ಆರೋಪಿಗಳು ಹಲವು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ. ಆದರೆ ಹಣ ಬಲದಿಂದ ಆರೋಪಿಗಳು ಯಾವುದೇ ಆತಂಕವಿಲ್ಲದೆ ಐಷಾರಾಮಿ ಜೀವನದೊಂದಿಗೆ ಜೈಲಿನಲ್ಲಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments

comments