Connect with us

UDUPI

ಬೈಕ್ ಸ್ಕಿಡ್ ಆಗಿ ಹಸುಗೂಸು ಸಾವು

ಬೈಕ್ ಸ್ಕಿಡ್ ಆಗಿ ಹಸುಗೂಸು ಸಾವು.

ಉಡುಪಿ ಅಕ್ಟೋಬರ್ 2: ಬೈಕ್ ಸ್ಕಿಡ್ ಆಗಿ 1 ವರ್ಷದ ಹಸುಗೂಸು ಸಾವನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಪರ್ಕಳದಲ್ಲಿ ಈ ಘಟನೆ ನಡೆದಿದ್ದು ಮಣಿಪಾಲದಿಂದ ಹಿರಿಯಡ್ಕ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಮಗವಿನ ಜೊತೆ ಬೈಕ್ ನಲ್ಲಿ ದಂಪತಿ ತೆರಳುತ್ತಿರುವಾಗ ರೋಡ್ ನಲ್ಲಿರುವ ಹೊಂಡವನ್ನು ತಪ್ಪಿಸುವ ಭರದಲ್ಲಿ ಬೈಕ್ ಸ್ಕಿಡ್ ಆಗಿ ಮಗು ರಸ್ತೆ ಗೆ ಎಸೆಯಲ್ಪಟ್ಟಿದೆ.

ರಸ್ತೆಗೆ ಬಿದ್ದ ಮಗು ಸ್ಥಳದಲ್ಲೆ ಸಾವನಪ್ಪಿದ್ದೆ. ಮೃತ ಮಗುವನ್ನು ಚಿರಾಗ್ ಎಂದು ಗುರುತಿಸಲಾಗಿದೆ. ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ಅಪಘಾತಗಳು ಸರ್ವೆ ಸಮಾನ್ಯವಾಗಿದ್ದು, ರಸ್ತೆಯ ದುಸ್ಥಿತಿಗೆ ಈ ಘಟನೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

 

Advertisement
Click to comment

You must be logged in to post a comment Login

Leave a Reply