Connect with us

UDUPI

ಬಿ.ಆರ್ ಶೆಟ್ಟಿ ನಿರ್ಮಾಣದ ಆಸ್ಪತ್ರೆ ವಿರುದ್ದ ಉಡುಪಿಯಲ್ಲಿ ಪ್ರತಿಭಟನೆ

ಬಿ.ಆರ್ ಶೆಟ್ಟಿ ನಿರ್ಮಾಣದ ಆಸ್ಪತ್ರೆ ವಿರುದ್ದ ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ ನವೆಂಬರ್ 19: ಸರಕಾರಿ ಜಾಗದಲ್ಲಿ ಉದ್ಯಮಿ ಬಿ.ಆರ್ ಶೆಟ್ಟಿ ನಿರ್ಮಾಣ ಮಾಡಿರುವ ಆಸ್ಪತ್ರೆ ವಿರುದ್ದ ಉಡುಪಿಯಲ್ಲಿ ಪ್ರತಿಭಟನ ನಡೆಯುತ್ತಿದೆ.

ಹಾಜಿ ಅಬ್ದುಲ್ಲಾ ಅವರು ಸರಕಾರಕ್ಕೆ ದಾನವಾಗಿ ನೀಡಿದ್ದ ಜಾಗದಲ್ಲಿ ಉದ್ಯಮಿ ಬಿ.ಆರ್ ಶೆಟ್ಟಿ ಅವರು ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದರು. ಸರಕಾರದ ಜಾಗದಲ್ಲಿ ಉದ್ಯಮಿಯೊಬ್ಬರು ಐಷರಾಮಿ ಆಸ್ಪತ್ರೆ ನಿರ್ಮಿಸುವುದರ ವಿರುದ್ದ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದೆ.

ಇಂದು ಆಸ್ಪತ್ರೆ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಅವರು ನೆರವೇರಿಸಲಿರುವ ಹಿನ್ನಲೆಯಲ್ಲಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರಿ ಆಸ್ಪತ್ರೆ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ಬಿ.ಆರ್ ಶೆಟ್ಟಿ ಐಷರಾಮಿ ಆಸ್ಪತ್ರೆ ಕಟ್ಟಿಸಿ ಹಣ ಮಾಡಲು ಹೊರಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Facebook Comments

comments