Connect with us

    DAKSHINA KANNADA

    ಬಿಜೆಪಿ ಬಸ್ ಗೆ ಸಿಪಿಎಂ ಕಲ್ಲು

    ಬಿಜೆಪಿ ಬಸ್ ಗೆ ಸಿಪಿಎಂ ಕಲ್ಲು

    ಕಾಸರಗೋಡು,ಅಕ್ಟೋಬರ್ 3: ಬಿಜೆಪಿ ಪಕ್ಷದ ಕೇರಳದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ನಡೆಸಲು ಉದ್ಧೇಶಿಸಿರುವ ಜನರಕ್ಷಾ ಯಾತ್ರೆಯನ್ನು ವಿಫಲಗೊಳಿಸುವ ಯತ್ನ ನಡೆದಿದೆ.ಯಾತ್ರೆಯಲ್ಲಿ ಕಾರ್ಯಕರ್ತರು ಸೇರದಂತೆ ತಡೆಯಲು ಕಾರ್ಯಕರ್ತರು ತೆರಳುವ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಇಂದು ಮುಂಜಾನೆ ಕಾಸರಗೋಡಿನಿಂದ ಪಯ್ಯನ್ನೂರಿಗೆ ತೆರಳುತ್ತಿದ್ದ ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಾಸರಗೋಡು-ಪಯ್ಯನ್ನೂರು ಮಾರ್ಗ ಮಧ್ಯೆಯಿರುವ ಪಲ್ಲಿಕರ ಎಂಬಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.ಕೇರಳದಲ್ಲಿ ಅಧಿಕಾರದಲ್ಲಿರುವ ಸಿ.ಪಿ.ಐ.ಎಂ ಪಕ್ಷ ರಾಜ್ಯದಲ್ಲಾಗುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ತಡೆಯುವುದರ ಬದಲು ಅದಕ್ಕೆ ಕುಮ್ಮಕ್ಕು ನೀಡುತ್ತಿದೆ ಎನ್ನುವ ಆರೋಪವೂ ಬಿಜೆಪಿ ಪಕ್ಷದ್ದಾಗಿದೆ. ಈ ಹಿನ್ನಲೆಯಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಿಂದ ತಿರುವನಂತಪುರದ ವರೆಗೆ ಜನರಕ್ಷಾ ಯಾತ್ರೆಯನ್ನು ಬಿಜೆಪಿ ಪಕ್ಷ ಹಮ್ಮಿಕೊಂಡಿದೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಮ್ ರಾಜಶೇಖರನ್ ನೇತೃತ್ವದಲ್ಲಿ ಈ ಯಾತ್ರೆ ನಡೆಸಲಾಗುತ್ತಿದೆ. ಯಾತ್ರೆಗೆ ಇಂದು ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಈ ಕಾರಣಕ್ಕಾಗಿ ಕಾಸರಗೋಡು ಹಾಗೂ ಇತರ ಜಿಲ್ಲೆಗಳಿಂದ ಪಯ್ಯನ್ನೂರಿಗೆ ಕಾರ್ಯಕರ್ತರು ತೆರಳುತ್ತಿರುವ ಸಂದರ್ಭದಲ್ಲಿ ಬಸ್ ಗಳಿಗೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಸಿಪಿಎಂ ಪಕ್ಷದ ಗೂಂಡಾಗಳೇ ಈ ಕೃತ್ಯವನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply