Connect with us

UDUPI

ಬಂದ್ ಆದ ಸುಜ್ಲಾನ್ ಕಂಪೆನಿ- ಕಾರ್ಮಿಕರು ಬಿದಿ ಪಾಲು

ಬಂದ್ ಆದ ಸುಜ್ಲಾನ್ ಕಂಪೆನಿ- ಕಾರ್ಮಿಕರು ಬಿದಿ ಪಾಲು

ಉಡುಪಿ ನವೆಂಬರ್ 14: ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಸುಜ್ಲಾನ್ ಕಂಪೆನಿಗೆ ಬೀಗ ಬಿದ್ದಿದೆ. ರಾತ್ರೋರಾತ್ರಿ ಲಾಕೌಟ್ ನೋಟಿಸ್ ನ್ನು ಬಿಡುಗಡೆ ಕಂಪೆನಿ ಬಿಡುಗಡೆ ಮಾಡಿದೆ.

ಉಡುಪಿಯ ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಸುಜ್ಲಾನ ಕಂಪೆನಿ ಪವನ್ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಗಾಳಿ ಯಂತ್ರದ ರಕ್ಕೆಗಳನ್ನು ತಯಾರಿಸಲಾಗುತ್ತಿತ್ತು.

ಕಳೆದ ವಾರವಷ್ಟೇ ಬಾಕಿ ಸಂಬಳ ಪಾವತಿ ಅಗ್ರಹಿಸಿ ನೂರಾರು ಗುತ್ತಿಗೆ ನೌಕರರಿಂದ ಪ್ರತಿಭಟನೆ ನಡೆದಿತ್ತು. ನಂತರ
ವಿವಿಧ ಸಂಘಟನೆ ಮಧ್ಯಸ್ಥಿಕೆಯಲ್ಲಿ ಕಂಪೆನಿ ಗುತ್ತಿಗೆ ನೌಕರರ ಬೇಡಿಕೆ ಈಡೇರಿಸಿತ್ತು.

ಇದೀಗ ಧಿಡೀರ್‍ ಲಾಕೌಟ್ ಸುದ್ದಿ ಹೊರ ಬಿದ್ದಿದ್ದು ನೂರಾರು ನೌಕರು ಕಂಪೆನಿಯಿಂದ ಹೊರ ಬಿದ್ದಿದ್ದಾರೆ.

Facebook Comments

comments