Connect with us

UDUPI

ಮಠ ಮಂದಿರಗಳ ಸರಕಾರದ ಮುಷ್ಠಿಯಿಂದ ತೆರವುಗೊಳಿಸಬೇಕಿದೆ – ಪ್ರವೀಣ್ ಬಾಯ್ ತೊಗಾಡಿಯಾ

ಮಠ ಮಂದಿರಗಳ ಸರಕಾರದ ಮುಷ್ಠಿಯಿಂದ ತೆರವುಗೊಳಿಸಬೇಕಿದೆ – ಪ್ರವೀಣ್ ಬಾಯ್ ತೊಗಾಡಿಯಾ

ಉಡುಪಿ ನವೆಂಬರ್ 24: ನಮ್ಮ ದೇಶದಲ್ಲಿ ಜ್ಯಾತ್ಯಾತೀತ ಸಂವಿಧಾನ ಜಾರಿಯಲ್ಲಿದ್ದರೂ ದೇಶದ ಮಠ ಮಂದಿರಗಳು ಸರಕಾರದ ಮುಷ್ಠಿಯಲ್ಲಿವೆ ಇಂದು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದೆ ಎಂದು ವಿ.ಎಚ್.ಪಿ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯ ಹೇಳಿದ್ದಾರೆ.

ಇಂದು ಉಡುಪಿಯಲ್ಲಿ ಧರ್ಮಸಂಸದ್ ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು.
ದೇಶದಲ್ಲಿ ಜಾತ್ಯತೀತತೆಯ ಹೆಸರಲ್ಲಿ ಮಠ, ಮಂದಿರಗಳ ಮೇಲೆ ಹಿಡಿತ ಸಾಧಿಸಲಾಗುತ್ತಿದ್ದು, ಮಠ, ಮಂದಿರಗಳು ಸರ್ಕಾರಿ ನಿಯಂತ್ರಣ ಮುಕ್ತ ಆಗಬೇಕು, ಜಾತ್ಯಾತೀತ ದೇಶದಲ್ಲಿ ಯಾವುದೇ ಚರ್ಚ್ ಮಸೀದಿ ಸರಕಾರದ ಹಿಡಿತದಲ್ಲಿದೆಯೇ ಎಂದು ಸಭೆಯಲ್ಲಿ ಪ್ರವೀಣ್ ತೊಗಡಿಯಾ ಪ್ರಶ್ನೆ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆಯಾಗಬೇಕು ಎಂದು ಹೇಳಿದ ಅವರು ದೇಶದಲ್ಲಿ 90 ಕೋಟಿ ಜನ ಮಂದಿರ ಸ್ಥಾಪನೆಯ ಪರ ಇದ್ದಾರೆ ದೇಶದ ಕೇವಲ ಹತ್ತು ಕೋಟಿ ಜನ ವಿರೋಧ ಇದ್ದಾರೆ ಎಂದು ತಿಳಿಸಿದರು.ಈ ಧರ್ಮಸಂಸದ್ ನಲ್ಲಿ ಸಾಧು, ಸಂತರು ಸೇರಿ ಮಂದಿರ ಸ್ಥಾಪನೆಯ ನಿರ್ಣಯ ಕೈಗೊಳ್ಳಲಿದ್ದಾರೆ ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ತೊಗಡಿಯಾ ತಿಳಿಸಿದರು.